newsics.com
ಮುಂಬೈ: ಇನ್ನು ಮುಂದೆ ಎಟಿಎಂನಲ್ಲಿ ಹಣ ಇಲ್ಲದಿದ್ದರೆ ಬ್ಯಾಂಕ್ ಗಳಿಗೆ ದಂಡ ವಿಧಿಸಲಾಗುವುದು ಎಂದು ಆರ್ ಬಿ ಐ ಎಚ್ಚರಿಕೆ ನೀಡಿದೆ. ಒಂದು ತಿಂಗಳಲ್ಲಿ ಹತ್ತು ಗಂಟೆಗಿಂತ ಹೆಚ್ಚು ಕಾಲ ಎಟಿಎಂ ಡ್ರೈ ಆಗಿದ್ದರೆ 10,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಆರ್ ಬಿ ಐ ಹೇಳಿದೆ. ಅಕ್ಟೋಬರ್ ತಿಂಗಳಲ್ಲಿ ಇದು ಜಾರಿಗೆ ಬರಲಿದೆ.
ವೈಟ್ ಲೇಬಲ್ ಎಟಿಎಂ ಗಳಲ್ಲಿ ಹಣ ಇಲ್ಲದಿದ್ದರೆ ಬ್ಯಾಂಕ್ ಗಳ ಮೇಲೆ ನೇರವಾಗಿ ದಂಡ ವಿಧಿಸಲಾಗುವುದು ಎಂದು ಆರ್ ಬಿ ಐ ಹೇಳಿದೆ. ದೇಶದ ಮಹಾನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಎಟಿಎಂ ಗಳಲ್ಲಿ ಹಣದ ಅಭಾವ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ