newsics.com
ನವದೆಹಲಿ: ಭಾರತದ ಪ್ರವಾಸಿಗರಿಗೆ ಬ್ರಿಟನ್ ಕ್ವಾರಂಟೈನ್ ಕಡ್ಡಾಯ ಪಡಿಸಿರುವುದಕ್ಕೆ ಪ್ರತಿಯಾಗಿ ಭಾರತ ಜಾರಿಗೆ ತಂದಿದ್ದ ಕಡ್ಡಾಯ ಕ್ವಾರಂಟೈನ್ ನೀತಿ ರದ್ದುಪಡಿಸಲಾಗಿದೆ. ಇನ್ನು ಮುಂದೆ ಭಾರತಕ್ಕೆ ಆಗಮಿಸುವ ಬ್ರಿಟನ್ ಪ್ರವಾಸಿಗರು ಕಡ್ಡಾಯ ಕ್ವಾರಂಟೈನ್ ಗೆ ಒಳಪಡಬೇಕಾದ ಅಗತ್ಯ ಇಲ್ಲ.
ಕಳೆದ ವಾರ ಬ್ರಿಟನ್ ಭಾರತದ ಪ್ರವಾಸಿಗರ ವಿರುದ್ಧ ಹೇರಲಾಗಿದ್ದ ಕಡ್ಡಾಯ ಕ್ವಾರಂಟೈನ್ ರದ್ದುಪಡಿಸಿತ್ತು. ಬ್ರಿಟನ್ ಸರ್ಕಾರದ ನೀತಿಗೆ ಭಾರತ ಈ ಹಿಂದೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.