newsics.com
ಎರ್ನಾಕುಳಂ: ಅಯ್ಯಪ್ಪನ ದೇವಸ್ಥಾನಕ್ಕೆ ಬರುವ ಎಲ್ಲರೂ ಸಮಾನರು. ಇದರಲ್ಲಿ ತಾರತಮ್ಯ ಮಾಡಬಾರದು. ವಿಐಪಿ ಸೇವೆ ಸೌಲಭ್ಯ ನೀಡಬಾರದು ಎಂದು ಕೇರಳ ಹೈಕೋರ್ಟ್ ಆದೇಶ ನೀಡಿದೆ.
ಶಬರಿಮಲೆಗೆ ಹೆಲಿಕಾಪ್ಟರ್ ಸೇವೆ ನೀಡುವ ಜಾಹೀರಾತು ಸಂಬಂಧ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಈ ಆದೇಶ ನೀಡಿದೆ.
ನಿಲಕ್ಕಲ್ ತಲುಪಿದ ಬಳಿಕ ಪ್ರತಿಯೊಬ್ಬ ಅಯ್ಯಪ್ಪ ಭಕ್ತ ಎಲ್ಲರಲ್ಲಿ ಒಬ್ಬನಾಗಿರುತ್ತಾನೆ. ಇಲ್ಲಿ ಮೇಲು ಕೀಳು ಎಂಬ ಕಲ್ಪನೆ ಬರಬಾರದು. ಎಲ್ಲರೂ ಸರಿ ಸಮಾನರು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.