newsics.com
ನವದೆಹಲಿ: ಬಳಕೆದಾರರಿಗೆ ಪ್ರತೀ ಬಾರಿ ಹೊಸ ಫೀಚರ್ ನೀಡುವ ವಾಟ್ಸಾಪ್ ಈಗ ಮತ್ತೊಂದು ಫೀಚರ್ ಪರಿಚಯಿಸಿದೆ.
ಈ ಮೂಲಕ ಡೆಸ್ಕ್ಟಾಪ್ ಆಪ್ ಮೂಲಕವೂ ವಿಡಿಯೋ, ವಾಯ್ಸ್ ಕಾಲ್ ಮಾಡಬಹುದಾಗಿದೆ.
ವಿಂಡೋಸ್ ಅಥವಾ ಐಒಎಸ್ ಸಿಸ್ಟಮ್ಗಳಲ್ಲಿ ಬಳಕೆ ಮಾಡುವ ವಾಟ್ಸ್ಆ್ಯಪ್ಗಳಲ್ಲಿ ವಿಡಿಯೋ ಕಾಲ್ ಹಾಗೂ ವಾಯ್ಸ್ ಕಾಲ್ ಮಾಡುವ ಹೊಸ ಸೌಲಭ್ಯ ನೀಡಲಾಗಿದೆ. ಆದರೆ ಗ್ರುಪ್ ಕಾಲ್ ಮಾಡಲು ಸಾಧ್ಯವಿಲ್ಲ. ಒಬ್ಬರಿಗೆ ಮಾತ್ರ ವೆಬ್ ಕ್ಯಾಮ್ ಇದ್ದರೆ ವಿಡಿಯೋ, ವಾಯ್ಸ್ ಕಾಲ್ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಗ್ರೂಪ್ ಕಾಲಿಂಗ್’ಗೂ ಅವಕಾಶ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.