Thursday, August 18, 2022

ಈಗ ವಾಟ್ಸಾಪ್’ನಲ್ಲೂ ಹಣ ಕಳುಹಿಸಬಹುದು!

Follow Us

newsics.com
ನವದೆಹಲಿ: ಇಂದಿನಿಂದ ನೀವು ವಾಟ್ಸಾಪ್’ನಲ್ಲೂ ಹಣ ಕಳುಹಿಸಬಹುದು. ಈಗ ವಾಟ್ಸಾಪ್ ಬಳಕೆದಾರರು ಆ‌ಪ್ ಮೂಲಕ ಹಣ ವರ್ಗಾಯಿಸಬಹುದಾಗಿದೆ. ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ವಾಟ್ಸಾಪ್‌ಗೆ ಅನುಮೋದನೆ ನೀಡಿದೆ.
ವಾಟ್ಸಾಪ್ ಯುಪಿಐ ಆಧಾರಿತ ಪಾವತಿ ಪರೀಕ್ಷೆಯನ್ನು ಈಗಾಗಲೇ ಮಾಡಿದ್ದು, ಇದಕ್ಕಾಗಿ ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ ಮತ್ತು ಜಿಯೋ ಪೇಮೆಂಟ್ಸ್ ಬ್ಯಾಂಕ್ ಜತೆ ಒಪ್ಪಂದ ಮಾಡಿಕೊಂಡಿದೆ. ಸುಮಾರು 3 ವರ್ಷಗಳಿಂದ ವಾಟ್ಸಾಪ್ ಎನ್ ಪಿ ಸಿ ಐ ಒಪ್ಪಿಗೆಗೆ ಕಾದಿತ್ತು. ಕೊನೆಗೂ ಎನ್’ಪಿಸಿಐ ಒಪ್ಪಿಗೆ ಸಿಕ್ಕಿದ್ದು, ಈಗ ವಾಟ್ಸಾಪ್ ಕಂಪನಿ ಭಾರತದಲ್ಲಿ ಲೈವ್ ಮಾಡಿದೆ.

ವಾಟ್ಸ್ಯಾಪ್ ಹೊಸ ಫೀಚರ್: ಏಳು ದಿನದಲ್ಲಿ ಮೆಸೇಜ್ ಮಾಯ

ಮೊದಲೇ ನಿಮ್ಮ ವಾಟ್ಸಾಪ್ ನಲ್ಲಿ ಪೇಮೆಂಟ್ ಆಯ್ಕೆಯಿದ್ದರೆ ನೀವು ಇದನ್ನು ಬಳಸಬಹುದು. ಒಂದು ವೇಳೆ ಆಯ್ಕೆ ಇಲ್ಲದೆ ಹೋದಲ್ಲಿ ನೀವು ವಾಟ್ಸಾಪ್ ಅಪ್ಡೇಟ್ ಮಾಡಿ ವಾಟ್ಸಾಪ್ ಪೇಮೆಂಟ್ ಆಯ್ಕೆಯನ್ನು ಪಡೆಯಬಹುದು. ವಾಟ್ಸಾಪ್ ಪೇಮೆಂಟ್ ಬಳಸಲು ಗ್ರಾಹಕರ ಬಳಿ ಡೆಬಿಟ್ ಕಾರ್ಡ್ ಇರಬೇಕು. ವಾಟ್ಸಾಪ್ ಪೇಮೆಂಟ್ ಗೆ ಹೋಗಿ ಬ್ಯಾಂಕ್ ವಿವರಗಳನ್ನು ನಮೂದಿಸಿದ ನಂತರ ಇದನ್ನು ಸಕ್ರಿಯಗೊಳಿಸಬಹುದಾಗಿದೆ. ದೇಶದಲ್ಲಿ ವಾಟ್ಸಾಪ್ ಪೇಮೆಂಟ್ ಹತ್ತು ಪ್ರಾದೇಶಿಕ ಭಾಷೆಯಲ್ಲಿ ಲಭ್ಯವಿದೆ.

2 ವರ್ಷ ಸೋಶಿಯಲ್ ಮೀಡಿಯಾದಿಂದ ದೂರವಿರಲು ಕೋರ್ಟ್ ಸೂಚನೆ

ಬೀದಿ ದೀಪಗಳಿಗೆ ಇನ್ಮುಂದೆ ಒಂದೇ ಸ್ವಿಚ್!

ಚನ್ನಮ್ಮ ವೃತ್ತದಲ್ಲಿ ಉರುಳಿದ ಲಾರಿ

ವಸೂಲಿ ಮಾಡಿದ ಚಕ್ರಬಡ್ಡಿ ಹಿಂತಿರುಗಿಸುತ್ತಿರುವ ಬ್ಯಾಂಕ್ ಗಳು

ಕೊಳವೆ ಬಾವಿಗೆ ಬಿದ್ದ ಮಗು: ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಮತ್ತಷ್ಟು ಸುದ್ದಿಗಳು

vertical

Latest News

ಮಸೀದಿಯಲ್ಲಿ ಬಾಂಬ್ ಸ್ಫೋಟ: 21 ಮಂದಿ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

newsics.com ಕಾಬೂಲ್‌(ಅಫ್ಘಾನಿಸ್ತಾನ): ಕಾಬೂಲ್‌ನಲ್ಲಿ ಮಸೀದಿಯೊಂದರ ಮೇಲೆ ಭಯೋತ್ಪಾದಕರು ಬಾಂಬ್ ದಾಳಿ ನಡೆಸಿದ್ದು, 21 ಜನ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕಾಬೂಲ್‌ನ ಖೈರ್ ಖಾನಾ ಪ್ರದೇಶದ ಮಸೀದಿಯಲ್ಲಿ...

ರಾಜ್ಯದಲ್ಲಿಂದು 886 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆ, ಮೂವರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 886 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಅವಧಿಯಲ್ಲಿ 1,999 ಸೋಂಕಿತರು ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 8,764ರಷ್ಟಾಗಿದೆ....

ವೃದ್ಧರಿಗೆಂದೇ ಇರುವ ಸ್ಟಾರ್ಟಪ್‌ನಲ್ಲಿ ರತನ್‌ ಟಾಟಾ ಹೂಡಿಕೆ

newsics.com ಬೆಂಗಳೂರು: ವೃದ್ಧರಿಗೆ ಜತೆಯಾಗಿದ್ದುಕೊಂಡು ಸೇವೆ ಸಲ್ಲಿಸಲೆಂದು ಆರಂಭವಾಗಿರುವ ಸ್ಟಾರ್ಟಪ್‌ ಕಂಪನಿಯಲ್ಲಿ ಹಿರಿಯ ಉದ್ಯಮಿ ರತನ್ ಟಾಟಾ ಹೂಡಿಕೆ ಮಾಡಲು ಮುಂದಾಗಿದ್ದಾರೆ. ದೇಶಾದ್ಯಂತ ಸುಮಾರು 5 ಕೋಟಿ ವೃದ್ಧರು ಸಂಗಾತಿಗಳಿಲ್ಲದೇ ಒಂಟಿಯಾಗಿದ್ದಾರೆ. ಅವರಿಗೆ ಈ ಕಂಪನಿ...
- Advertisement -
error: Content is protected !!