ನವದೆಹಲಿ: ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾನೂನು ಕಿಚ್ಚು ಹೊತ್ತಿಸಿರುವ ಮಧ್ಯೆಯೇ ಪೌರತ್ವ ನೋಂದಣಿಯ ಮಹತ್ವದ ಸಭೆ ದೆಹಲಿಯಲ್ಲಿ ಆಯೋಜಿಸಲಾಗಿದೆ. ರಿಜಿಸ್ಟಾರ್ ಜನರಲ್ ಅಫ್ ಸರ್ವೇ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಸಭೆಗೆ ಆಮಂತ್ರಿಸಲಾಗಿದೆ. ಆದರೆ, ಪಶ್ಚಿಮ ಬಂಗಾಳ ಸರ್ಕಾರ ಇದನ್ನು ತಿರಸ್ಕರಿಸಿದ್ದು, ಸಭೆಯಿಂದ ದೂರ ಉಳಿದಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.