newsics.com
ಮುಂಬೈ: ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ 24 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ.
ಮಹಾರಾಷ್ಟ್ರದಲ್ಲಿ ಶುಕ್ರವಾರ ದಾಖಲೆಯ 24,886 ಮಂದಿಗೆ ಕೊರೋನಾ ವೈರಸ್ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 10,15,681ಕ್ಕೆ ಏರಿಕೆಯಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನಾಗೆ 393 ಮಂದಿ ಬಲಿಯಾಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 28,724ಕ್ಕೆ ಏರಿಕೆಯಾಗಿದೆ.
ಮುಂಬೈನಲ್ಲಿ 2191 ಹೊಸ ಪ್ರಕರಣಗಳು ಮತ್ತು 44 ಸಾವುಗಳು ವರದಿಯಾಗಿದ್ದು, ಇದರೊಂದಿಗೆ ವಾಣಿಜ್ಯ ನಗರಿ ಮುಂಬೈನಲ್ಲಿ ಸೋಂಕಿತರ ಸಂಖ್ಯೆ 1,65,306 ಮತ್ತು ಸಾವಿನ ಸಂಖ್ಯೆ 8,067ಕ್ಕೆ ತಲುಪಿದೆ.
ದೇಶದಲ್ಲಿ ಕೊರೋನಾ ಎರಡನೇ ಅಲೆ- ಏಮ್ಸ್ ಎಚ್ಚರಿಕೆ
ಜೆಇಇ ಮುಖ್ಯ ಪರೀಕ್ಷೆ ರಿಸಲ್ಟ್; 24 ಅಭ್ಯರ್ಥಿಗಳಿಗೆ ಶೇ.100 ಅಂಕ
58 ಮತದಾರರ ಭೇಟಿಗಾಗಿ 11 ಗಂಟೆ ಅವಧಿಯಲ್ಲಿ 24 ಕಿ.ಮೀ. ನಡೆದ ಸಿಎಂ!