ಗುವಾಹಟಿ: ಅಸ್ಸಾಂ ತೈಲಬಾವಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ವಿದೇಶಿ ತಜ್ಞರು ಗಾಯಗೊಂಡಿದ್ದಾರೆ.
ಆಂಥೊನಿ ಸ್ಟೀವನ್ ರೆನಾಲ್ಡ್ಸ್, ಕ್ರೇಗ್ ನೇಲ್ ಡಂಕನ್, ಡೌಗ್ ಡಲ್ಲಾಸ್ ಗಾಯಗೊಂಡಿರುವ ಮೂವರು ತಜ್ಞರು.
ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಬಾಘ್ಜನ್ ಪ್ರದೇಶದಲ್ಲಿರುವ ಆಯಿಲ್ ಇಂಡಿಯಾ ಲಿಮಿಟೆಡ್ ತೈಲ ಬಾವಿಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ತಜ್ಞರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಯಿಲ್ ಇಂಡಿಯಾ ಸೀನಿಯರ್ ಮ್ಯಾನೇಜರ್ ತಿಳಿಸಿದ್ದಾರೆ.
ಈ ಮೂವರು ವಿದೇಶಿ ತಜ್ಞರು ಕಳೆದ ಒಂದು ತಿಂಗಳಿನಿಂದ ಆ ತೈಲ ಬಾವಿಯನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದರು. ಬ್ಲೋ ಔಟ್ ಪ್ರಿವೆಂಟರ್ ಇಲ್ಲದೆಯೇ ತೈಲ ಬಾವಿಯನ್ನು ತೆರೆದ ಪರಿಣಾಮ ಜೂನ್ 9 ರಂದು ಒಮ್ಮೆ ಬೆಂಕಿ ಕಾಣಿಸಿಕೊಂಡಿತ್ತು. ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಾವನ್ನಪ್ಪಿದ್ದರು. ಕಳೆದ ಮೇ 28ರಿಂದಲೇ ತೈಲ ಬಾವಿಯಲ್ಲಿ ಗ್ಯಾಸ್ ಲೀಕ್ ಆಗುತ್ತಿತ್ತು.
ತೈಲಬಾವಿ ಸ್ಫೋಟ; ಮೂವರು ವಿದೇಶಿ ತಜ್ಞರಿಗೆ ಗಾಯ
Follow Us