Saturday, April 17, 2021

16ರ ಪೋರಿಗೆ ಲವ್ ಲೆಟರ್ ಕೊಟ್ಟ 67ರ ಪೋಲಿ ಅಜ್ಜ!

ತಮಿಳುನಾಡು: ಪ್ರೇಮಕ್ಕೆ‌ ಕಣ್ಣಿಲ್ಲ, ಕುರುಡು ಅಂತಾರೆ. ಆದರೆ ಇಲ್ಲೊಬ್ಬ ವೃದ್ಧ ಪ್ರೇಮಕ್ಕೆ ವಯಸ್ಸಿಲ್ಲ ಅಂತ ಸಾಬೀತುಮಾಡೋಕೆ ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.
ತಮಿಳುನಾಡಿನ ಕೊಯಮುತ್ತೂರಿನಲ್ಲಿ ಈ ಘಟನೆ ನಡೆದಿದ್ದು, 67 ವರ್ಷದ ಚಾಲಾಕಿ ತಾತ ಪಕ್ಕದ ಮನೆಯ 16 ವಯಸ್ಸಿನ ಅಪ್ರಾಪ್ತ ಬಾಲಕಿಗೆ ಲವ್ ಲೆಟರ್ ನೀಡಿ ವಿಕೃತಿ ಮೆರೆದಿದ್ದು ಬಾಲಕಿ ಆ ಲೆಟರ್ ನ್ನು ಪೋಷಕರಿಗೆ ನೀಡಿದ್ದಾಳೆ. ಪತ್ರದಲ್ಲಿ ನೀನಂದ್ರೆ ನನಗಿಷ್ಟ. ನಿನಗೂ ನಾನಂದ್ರೆ ಇಷ್ಟಾನಾ ಎಂದು ಪ್ರಶ್ನಿಸಿದ್ದಾನೆ.
ವೃದ್ಧನ ಈ ಚಪಲ ಕಂಡ ಹೆತ್ತವರು ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗಿದ್ದರು. ಆದರೆ ವೃದ್ಧನ ಮನೆಯವರು ಬಾಲಕಿ ಪೋಷಕರಲ್ಲಿ ಕ್ಷಮೆ ಕೇಳಿದ್ದರಿಂದ ಸುಮ್ಮನಾಗಿದ್ದಾರೆ‌.
ಇಷ್ಟಕ್ಕೇ ಸುಮ್ಮನಾಗದ ತಾತ ಮತ್ತೆ ಕೆಲ ದಿನಗಳಲ್ಲೇ ಬಾಲಕಿಗೆ ರಸ್ತೆ ಮಧ್ಯೆ ಪ್ರೇಮನಿವೇದನೆ ಮಾಡಿದ್ದಾನೆ. ಇದರಿಂದ ಬೆದರಿದ ಹುಡುಗಿ ಮನೆಯಲ್ಲೇ ಇರಲು ಆರಂಭಿಸಿದ್ದಾಳೆ. ಪೋಷಕರು ಮಗಳ ಸ್ಥಿತಿ ಕಂಡು ಕಂಗಾಲಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಸದ್ಯ ಅಪ್ರಾಪ್ತ ಬಾಲಕಿ ಪೋಷಕರ ದೂರು ಆಧರಿಸಿ ಪೊಲೀಸರು ಪೋಲಿ ವೃದ್ಧನನ್ನು ಬಂಧಿಸಿದ್ದಾರೆ. 67 ವರ್ಷದ ಮೊಹಮ್ಮದ್ ಬಹೀರ್ ಬಾಷಾ ಎಂಬಾತನೇ ಹೀಗೆ ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿಸಲು ಹೋಗಿ ಜೈಲು ಸೇರಿದ ವೃದ್ಧ.

ಮತ್ತಷ್ಟು ಸುದ್ದಿಗಳು

Latest News

ತ್ರಿಬಲ್ ಟಿ ಸೂತ್ರ ಪಾಲನೆಗೆ ಪ್ರಧಾನಿ ಮೋದಿ ಸಲಹೆ

newsics.com ನವದೆಹಲಿ: ಇಂದಿಲ್ಲಿ (ಏ.17) ನಡೆದ ಕೊರೋನಾ ಹಿನ್ನೆಲೆಯ ಮಹತ್ವದ ಸಭೆಯ ಬಳಿಕ ಪ್ರಧಾನಿ ಮೋದಿಯವರು ತ್ರಿಬಲ್ ಟಿ ಸೂತ್ರ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ. ದೇಶದಲ್ಲಿ ಅತಿಯಾಗಿ ಹೆಚ್ಚುತ್ತಿರುವ ಕೊರೋನಾ...

ಆಮ್ಲಜನಕ‌ ಕೊರತೆ: ಐಸಿಯುನಲ್ಲಿದ್ದ ಮೂವರು ಕೊರೋನಾ ಸೋಂಕಿತರು ಸಾವು

newsics.com ಲಖನೌ (ಉತ್ತರ ಪ್ರದೇಶ): ಆಮ್ಲಜನಕದ ಕೊರತೆಯಿಂದಾಗಿ ಮೂವರು ಕೋವಿಡ್ ರೋಗಿಗಳು ಶನಿವಾರ ಸಾವನ್ನಪ್ಪಿದ್ದಾರೆ. ಮೃತರು ಗೋಮ್ಟಿನಗರದ ಡಾ. ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಐಸಿಯುಗೆ ದಾಖಲಾಗಿದ್ದರು. ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು,...

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ ಮಾರಾಟದ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ...
- Advertisement -
error: Content is protected !!