Sunday, July 3, 2022

ಮಾಂತ್ರಿಕ ವೃದ್ಧೆಯ ರುಂಡ ಹಿಡಿದು ಠಾಣೆಗೆ ಬಂದ..!

Follow Us

ಒಡಿಶಾ: ಮಾಂತ್ರಿಕ ವೃದ್ಧೆಯನ್ನು ಹತ್ಯೆಗೈದ ವ್ಯಕ್ತಿಯೊಬ್ಬ ಆಕೆಯ ರುಂಡ ಹಿಡಿದು ಒಂದೂವರೆ ಕಿಮೀ ದೂರದಲ್ಲಿದ್ದ ಪೊಲೀಸ್ ಠಾಣೆಗೆ ಸಾಗಿ ಶರಣಾಗಿದ್ದಾನೆ.
ಈ ಅಮಾನುಷ ಘಟನೆ ಒಡಿಶಾದ ಜಾಜಪುರ್ ಜಿಲ್ಲೆಯ ಛತಾರಾ ಗ್ರಾಮದಲ್ಲಿ ನಡೆದಿದೆ. ಮಾಟ ಮಂತ್ರದ ಮೂಲಕ ತನ್ನ ಸಂಬಂಧಿಗಳ ಹತ್ಯೆಗೆ ಕಾರಣಳಾಗಿದ್ದಾಳೆಂದು ಆರೋಪಿಸಿ ಈ ಕೃತ್ಯ ನಡೆಸಿದ್ದಾಗಿ 30 ವರ್ಷ ವಯಸ್ಸಿನ ಆರೋಪಿ ಕಾರ್ತಿಕ ಕೇರಾಯ್ ಪೊಲೀಸರಿಗೆ ತಿಳಿಸಿದ್ದಾನೆ.
ಛತಾರಾ ಗ್ರಾಮದ ನಂದಿನಿ ಪೂರ್ತಿ ಕೊಲೆಯಾದ ವೃದ್ಧೆ. ಅನಾರೋಗ್ಯಪೀಡಿತನಾಗಿದ್ದ ತನ್ನ ಸಂಬಂಧಿಕನ ಸಾವಿಗೆ ಈ ಮಾಟಗಾತಿ ಅಜ್ಜಿಯೇ ಕಾರಣವೆಂದು ತಿಳಿದು ಆಕೆಯನ್ನು ಬರ್ಭರವಾಗಿ ಕೊಲೆ ಮಾಡಿದ್ದಾಗಿ ಆರೋಪಿ ಕಾರ್ತಿಕ ಕೇರಾಯ್ ಪೊಲೀಸರ ಬಲಿ ಒಪ್ಪಿಕೊಂಡಿದ್ದಾನೆ. ವೃದ್ಧೆಯ ಶವವನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಕಲುಷಿತ ನೀರು ಸೇವನೆ; 40 ಕ್ಕೂ ಹೆಚ್ಚು ಜನ ಅಸ್ವಸ್ಥ

newsics.com ರಾಯಚೂರು; ಕಲುಷಿತ ನೀರು ಸೇವನೆ ಮಾಡಿ 40 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ಅನೇಕರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಲ್ಕಂದಿನ್ನಿಯ ಸರ್ಕಾರಿ...

ಅನಾರೋಗ್ಯ ನೆಪವೊಡ್ಡಿ ಏರ್ ಇಂಡಿಯಾ ಸಂದರ್ಶನಕ್ಕೆ ಹಾಜರಾದ ಇಂಡಿಗೋ ಸಿಬ್ಬಂದಿ, ವಿಮಾನ ಸೇವೆ ವ್ಯತ್ಯಯ

newsics.com ನವದೆಹಲಿ: ಏರ್ ಇಂಡಿಗೋ ಸಿಬ್ಬಂದಿ ಅನಾರೋಗ್ಯದ ನೆಪವೊಡ್ಡಿ ಶನಿವಾರ ಏರ್ ಇಂಡಿಯಾ‌ ಸಂದರ್ಶನಕ್ಕೆ ತೆರಳಿದ್ದರಿಂದ ಇಂಡಿಗೋ ಸೇವೆಯಲ್ಲಿ‌ ವ್ಯತ್ಯಯ ಉಂಟಾಗಿತ್ತು. ವಿಮಾನಯಾನ ವ್ಯತ್ಯಯ ಉಂಟಾಗಿದ್ದಕ್ಕೆ ಇಂಡಿಗೋ ಬಳಿ ಕಾರಣ ಕೇಳಲಾಗಿದೆ ಎಂದು ನಾಗರಿಕ ವಿಮಾನಯಾನ...

ಬೆಂಗಳೂರಿನಲ್ಲಿ 746 ಮಂದಿ ಸೇರಿ ರಾಜ್ಯದಲ್ಲಿ 826 ಜನಕ್ಕೆ ಕೊರೋನಾ ಸೋಂಕು

newsics.com ಬೆಂಗಳೂರು ; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಇಂದು ಒಟ್ಟು 826 ಕೊರೊನಾ ಪ್ರಕರಣ ವರದಿಯಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 6,666ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,72,285ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು...
- Advertisement -
error: Content is protected !!