newsics.com
ನವದೆಹಲಿ: ಜಪಾನ್ ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳೆಯರ ಹಾಕಿ ತಂಡ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರೂ ಭಾರತೀಯರ ಮನ ಗೆದ್ದಿದೆ.
ಆದರೆ ಕ್ರೀಡಾಕೂಟದ ಆರಂಭದ ಸುತ್ತಿನಲ್ಲಿ ಗುಂಪು ಪಂದ್ಯದಲ್ಲಿ ಭಾರತ ಮಹಿಳೆಯರ ಹಾಕಿ ತಂಡ ಸೋಲು ಅನುಭವಿಸಿತ್ತು. ಈ ಸಂದರ್ಭದಲ್ಲಿನ ಅನುಭವವನ್ನು ತಂಡದ ಗೋಲ್ ಕೀಪರ್ ಸವಿತಾ ಪುನಿಯಾ ಹಂಚಿಕೊಂಡಿದ್ದಾರೆ.
ಬ್ರಿಟನ್ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ತಂಡದ ಕೋಚ್ ಸೋರ್ಜಾಡ್ ಮ್ಯಾರಿಜೆನ್ ನಮ್ಮ ಜತೆ ಊಟ ಮಾಡಲು ಕೂಡ ನಿರಾಕರಿಸಿದರು.
ಅವರಿಗೆ ಬೇಸರವಾಗಿತ್ತು. ಇದನ್ನು ಹೋಗಲಾಡಿಸಲು ಮತ್ತೆ ಅವರ ವಿಶ್ವಾಸಗಳಿಸಲು ಕಠಿಣ ಪರಿಶ್ರಮ ಪಡಲು ತೀರ್ಮಾನಿಸಿದ್ದೆವು ಎಂದು ಸವಿತಾ ಹೇಳಿದ್ದಾರೆ.