Thursday, November 26, 2020

ಓಮರ್ ಅಬ್ದುಲ್ಲಾ ಬಂಧನ ಪ್ರಕರಣ: ಇಂದು ಸುಪ್ರೀಂ ಕೋರ್ಟ್ ವಿಚಾರಣೆ

ನವದೆಹಲಿ:  ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ  ಓಮರ್ ಅಬ್ದುಲ್ಲಾ ಅವರನ್ನು  ಜಮ್ಮು ಕಾಶ್ಮೀರ ಭದ್ರತಾ ಕಾನೂನಿನ ಅಡಿಯಲ್ಲಿ ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದೆ.  ಅಬ್ದುಲ್ಲಾ ಅವರ ತಂಗಿ ಸಾರಾ ಅಬ್ದುಲ್ಲಾ ಈ ಅರ್ಜಿ ಸಲ್ಲಿಸಿದ್ದಾರೆ. ಕಾನೂನಿಗೆ ವಿರುದ್ಧವಾಗಿ ತಮ್ಮ ಸಹೋದರನನ್ನು ಬಂಧಿಸಲಾಗಿದೆ. ಅಲ್ಲದೆ ಮಾನವ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಅವರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಮುಂಜಾಗ್ರತಾ ಕ್ರಮವಾಗಿ  ಕೆಲವು ರಾಜಕಾರಣಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ ಓಮರ್ ಅಬ್ದುಲ್ಲಾ ಕೂಡ ಒಬ್ಬರಾಗಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಕೊರೋನಾ ಪರೀಕ್ಷೆ ನಡೆಸುತ್ತೆ ಈ ರೊಬೋಟ್

NEWSICS.COM ಈಜಿಪ್ಟ್: ಕೊರೋನಾ ಪರೀಕ್ಷೆ ನಡೆಸಲು ವೈದ್ಯರು ಕಿಟ್ ಗಳನ್ನು ಬಳಸುತ್ತಿರುವ ವೇಳೆ ಕೊರೋನಾ ರೋಗಿಗಳ ತಪಾಸಣೆಗೆಂದೇ ಈಜಿಪ್ಟ್ ನಲ್ಲಿ ರೊಬೋಟ್ ಒಂದನ್ನು ತಯಾರು ಮಾಡಲಾಗಿದೆ. ಈಜಿಪ್ಟ್ ನಲ್ಲಿ...

ಏಷ್ಯಾದಲ್ಲಿಯೇ ಭಾರತದಲ್ಲಿ ಲಂಚದ ಪ್ರಮಾಣ ಹೆಚ್ಚು: ಅಧ್ಯಯನ

NEWSICS.COM ನವದೆಹಲಿ: ಭಾರತವು ಏಷ್ಯಾದಲ್ಲಿ ಅತಿ ಹೆಚ್ಚು ಲಂಚದ ಪ್ರಮಾಣವನ್ನು ಹೊಂದಿದೆ ಎಂದು ಅಧ್ಯಯನ ಒಂದು ಹೇಳಿದೆ. ಸಾರ್ವಜನಿಕ ಸೇವೆ ಪಡೆಯಲು ವೈಯಕ್ತಿಕ ಸಂಪರ್ಕಗಳನ್ನು ಬಳಸುವವರ ಸಂಖ್ಯೆ ಹೆಚ್ಚು ಎಂದು ಭ್ರಷ್ಟಾಚಾರ ವಾಚ್‌ಡಾಗ್ ಟ್ರಾನ್ಸ್‌ಪರೆನ್ಸಿ...

ನಲ್ಲಿ ನೀರಿಗೆ ಹೊತ್ತಿಕೊಂಡ ಬೆಂಕಿ

NEWSICS.COM ಚೀನಾ: ಚೀನಾದಲ್ಲಿ ನಲ್ಲಿಯಲ್ಲಿ ಬರುವ ಕುಡಿಯುವ ನೀರಿಗೆ ಬೆಂಕಿ ಹೊತ್ತಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಮಹಿಳೆಯೊಬ್ಬರು ನಲ್ಲಿಯಲ್ಲಿ ಬರುವ ಕುಡಿಯುವ ನೀರಿಗೆ ಬೆಂಕಿ ಹೊತ್ತಿಕೊಂಡಿದ್ದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ...
- Advertisement -
error: Content is protected !!