ಸೇಲಂ(ತಮಿಳುನಾಡು): ಜಿಲ್ಲೆಯ ಒಮಲೂರು ಬಳಿಯ ನಾರಿಪಲ್ಲಂನಲ್ಲಿ ಬುಧವಾರ ಮಧ್ಯರಾತ್ರಿ ಎರಡು ಓಮ್ನಿ ಬಸ್‌ಗಳು ಪರಸ್ಪರ ಡಿಕ್ಕಿಯಾಗಿ ನೇಪಾಳದ ಆರು ಪ್ರವಾಸಿಗರು ಮೃತಪಟ್ಟಿದ್ದು, 28 ಮಂದಿ ಗಾಯಗೊಂಡಿದ್ದಾರೆ.
ಕಠ್ಮಂಡುವಿನಿಂದ 34 ಪ್ರವಾಸಿಗರ ತಂಡ ಕನ್ಯಾಕುಮಾರಿಗೆ ಭೇಟಿ ನೀಡಿ ಓಮ್ನಿ ಬಸ್‌ನಲ್ಲಿ ರಾಜಸ್ಥಾನಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಸೇಲಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಓಮ್ನಿ ಬಸ್ ಡಿಕ್ಕಿ: 6 ನೇಪಾಳಿಗರ ಸಾವು, 28 ಮಂದಿಗೆ ಗಾಯ
Follow Us