newsics.com
ನವದೆಹಲಿ: ತಪಾಸಣೆಗೆಂದು ಪೊಲೀಸರು ಕಾರೊಂದನ್ನು ತಡೆದಿದ್ದು, ಚಾಲಕ ಕಾರನ್ನು ನಿಲ್ಲಿಸದೆ ಪೊಲೀಸ್ ಸಿಬ್ಬಂದಿಯನ್ನೇ ಎಳೆದೊಯ್ದ ಘಟನೆ ದೆಹಲಿಯ ಚೆಕ್ ಪೋಸ್ಟ್ ವೊಂದರಲ್ಲಿ ಶನಿವಾರ ನಡೆದಿದೆ.
ಪಂಜಾಬ್ ನ ಪಟಿಯಾಲದಲ್ಲಿ ಈ ಘಟನೆ ನಡೆದಿದ್ದು, ಸಿಬ್ಬಂದಿಯನ್ನು ಎಳೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಕಾರಿಗೆ ಸಿಕ್ಕ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವೇಗವಾಗಿ ಬಂದ ಕಾರನ್ನು ಅಡ್ಡಹಾಕಿದ ಪೊಲೀಸ್ ಆ ಕಾರನ್ನು ಪರಿಶೀಲನೆ ಮಾಡಲು ಮುಂದಾಗಿದ್ದಾರೆ. ಆದರೆ, ಕಾರು ನಿಲ್ಲಿಸದ ಚಾಲಕ ವೇಗವಾಗಿ ಕಾರು ಚಲಾಯಿಸಿಕೊಂಡು ಮುಂದೆ ಹೋಗಿದ್ದಾನೆ. ಈ ವೇಳೆ ಕಾರಿನ ರಭಸಕ್ಕೆ ಪೊಲೀಸ್ ಹಣೆ ಕಾರಿನ ಎಡಭಾಗದ ಕನ್ನಡಿಗೆ ಬಡಿದಿದೆ. ಬಳಿಕ ಅವರು ರಸ್ತೆಯಲ್ಲಿ ಬಿದ್ದಿದ್ದಾರೆ
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಚೆಕ್ ಪೋಸ್ಟ್ ಹಾಗೂ ಹೆದ್ದಾರಿಗಳಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
#WATCH Car evading security check hits police personnel in Patiala, Punjab
Police say the injured police personnel is under medical treatment, car traced, further investigation underway
(Video source: Police) pic.twitter.com/ZF9wygy8Xm
— ANI (@ANI) August 14, 2021
ಅವಿವಾಹಿತ ಭಾರತೀಯ ಮಹಿಳೆ ಕೇವಲ ಮೋಜಿಗಾಗಿ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗುವುದಿಲ್ಲ- ಹೈಕೋರ್ಟ್
ಯುವಜೋಡಿಯ ಖಾಸಗಿ ದೃಶ್ಯ ಚಿತ್ರೀಕರಣ: ಬ್ಲ್ಯಾಕ್‌ಮೇಲ್, ಯುವಕ ಆತ್ಮಹತ್ಯೆ