Friday, May 20, 2022

ಹೈದರಾಬಾದ್ ನಲ್ಲಿ ಮತ್ತೊಂದು ಮರ್ಯಾದೆ ಹತ್ಯೆ?

Follow Us

ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಮತ್ತೊಮ್ಮೆ ಮರ್ಯಾದೆ ಹತ್ಯೆ ನಡೆದಿದೆ ಎಂಬ ಮಾತು ದಟ್ಟವಾಗಿದೆ. ನವವಿವಾಹಿತ  ಹೇಮಂತ್ ಅವರನ್ನು ಅವರ ಮಾವನೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹೇಮಂತ್ ಮತ್ತು ಅವಂತಿ ಮದುವೆ ಜೂನ್ ನಲ್ಲಿ ನಡೆದಿತ್ತು.

ಹೇಮಂತ್ ಪದವೀಧರರಾಗಿದ್ದರು. ಅವಂತಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಅವಂತಿ ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೇಮಂತ್ ಇತರ ಜಾತಿಗೆ ಸೇರಿದವರಾಗಿದ್ದರು. ಈ ಮದುವೆಯನ್ನು ಅವಂತಿ ತಂದೆ  ಯುಗಂಧರ್ ರೆಡ್ಡಿ ವಿರೋಧಿಸಿದ್ದರು.

ಹೈದರಾಬಾದಿನ ಚಂದಾನಗರದಲ್ಲಿ ವಾಸಿಸುತ್ತಿದ್ದ ಹೇಮಂತ್ ಅವರನ್ನು ತಂಡವೊಂದು ಕಾರಿನಲ್ಲಿ ಅಪಹರಿಸಿತ್ತು. ಮೂರು ದಿನಗಳ ಬಳಿಕ ಸಂಗಾರೆಡ್ಡಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಹೇಮಂತ್ ಮೃತದೇಹ ಪತ್ತೆಯಾಗಿತ್ತು.

ಇದು ಮರ್ಯಾದೆ ಹತ್ಯೆ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಮಾತುಗಾರರ ಶೋಧಕ್ಕೆ ಮುಂದಾದ ಕಾಂಗ್ರೆಸ್‌ನಿಂದ ಭಾಷಣ ಸ್ಪರ್ಧೆ: ವಿಜೇತರಿಗೆ ಐಫೋನ್ ಬಹುಮಾನ

newsics.com ಬೆಂಗಳೂರು: ಯುವ ಮಾತುಗಾರರ ಶೋಧಕ್ಕೆ ಮುಂದಾಗಿರುವ ಕಾಂಗ್ರೆಸ್, ಇದಕ್ಕಾಗಿ ಭಾಷಣ ಸ್ಪರ್ಧೆಯನ್ನು ಆಯೋಜಿಸಿದೆ. ರಾಜ್ಯಮಟ್ಟದ ಈ ಭಾಷಣ ಸ್ಪರ್ಧೆಯಲ್ಲಿ ಗೆಲ್ಲುವ ಮಾತುಗಾರರಿಗೆ ಐಫೋನ್ ಸಿಗಲಿದೆ. ಅಷ್ಟೇ ಅಲ್ಲ,...

ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು, ನಾಲ್ವರನ್ನು ರಕ್ಷಿಸಿದ ಗ್ರಾಮಸ್ಥರು

newsics.com ಗದಗ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು ಹಾಗೂ ಅದರಲ್ಲಿದ್ದ ನಾಲ್ವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕುನ ನೆಲೋಗಲ್ ಗ್ರಾಮದ ಬಳಿ ಶುಕ್ರವಾರ ಈ ಘಟನೆ ನಡೆದಿದೆ. ನಿರಂತರ ಮಳೆಯಿಂದಾಗಿ ನೆಲೋಗಲ್-ಬೆಳ್ಳಟ್ಟಿ...

ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ‌ ಬಂಧನ

newsics.com ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಸುಭಾಷ್ ಗುಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಭಾವನ ಮೇಲೆ ಸೇಡು ತೀರಿಸಿಕೊಳ್ಳಲು ಬೆದರಿಕೆ ಕರೆ ಮಾಡಿದ್ದ ಸುಭಾಷ್, ವಿಚ್ಛೇದಿತ...
- Advertisement -
error: Content is protected !!