ಕಾಶ್ಮೀರದಲ್ಲಿ ಭದ್ರತಾಪಡೆ ಕಾರ್ಯಾಚರಣೆ: ಪಾಂಪೋರ್ ನಲ್ಲಿ ಉಗ್ರನ ಹತ್ಯೆ

Newsics.com ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ದದ ಕಾರ್ಯಾಚರಣೆ ಮುಂದುವರಿದಿದೆ. ಶ್ರೀನಗರ ಸಮೀಪದ ಪಾಂಪೋರ್ ಬಳಿಯ ಲಾಲ್ ಪೋರಾದಲ್ಲಿ ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ. ಮೃತಪಟ್ಟ ಉಗ್ರ ಯಾವ ಸಂಘಟನೆಗೆ ಸೇರಿದವ ಎಂಬುದು ಇದುವರೆಗೆ ದೃಢಪಟ್ಟಿಲ್ಲ. ಇಡೀ ಪ್ರದೇಶವನ್ನು ಭದ್ರತಾಪಡೆ ಸುತ್ತುವರಿದಿದೆ. ಇದೇ ವೇಳೆ ಗುರುವಾರ ರಾತ್ರಿ  ಕುಪ್ವಾರದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಇವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ತಾಳ್ಮೆಯಿಂದ ಇರಿ: ಬೆಂಬಲಿಗರಿಗೆ ಜೊ ಬಿಡೆನ್ ಕರೆ