ಚಂಡೀಗಢ: ಇಲ್ಲಿನ ಮಹಿಳಾ ಸಂಘಟನೆಯೊಂದು 65 ರೂಪಾಯಿಗೆ ಒಂದು ಕೆಜಿ ಈರುಳ್ಳಿ ಮಾರಾಟ ಮಾಡಿದ್ದು, ಕೇವಲ ನಾಲ್ಕು ಗಂಟೆಯೊಳಗೆ 800 ಕೆಜಿ ಈರುಳ್ಳಿಯನ್ನು ಮಾರಾಟ ಮಾಡಿರುವುದಾಗಿ ತಿಳಿಸಿದೆ.
ಈರುಳ್ಳಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಚಂಡೀಗಢದ ನಾರಿ ಜಾಗೃತಿ ಮಂಚ್ ನ ಮಹಿಳಾ ಪಿಂಕ್ ಬ್ರಿಗೇಡ್ ಕಡಿಮೆ ದರಕ್ಕೆ ಈರುಳ್ಳಿ ಮಾರಾಟ ಮಾಡುವ ಕೆಲಸಕ್ಕೆ ಮುಂದಾಗಿರುವುದಾಗಿ ಹೇಳಿದೆ.
ಒಬ್ಬ ವ್ಯಕ್ತಿ ಎರಡು ಕಿಲೋ ಈರುಳ್ಳಿಯನ್ನು ಖರೀದಿಸಬಹುದಾಗಿದೆ. ಅಲ್ಲದೇ ಈರುಳ್ಳಿ ಖರೀದಿದಾರರು ಪ್ಲಾಸ್ಟಿಕ್ ಬದಲು ಪರಿಸರ ಸ್ನೇಹಿ ಚೀಲವನ್ನು ತರಬೇಕು ಎಂದು ಸೂಚಿಸಿತ್ತು. ಸೆಕ್ಟರ್ 40ರ ಶ್ರೀ ಹನುಮಾನ್ ಧಾಮ್ ಮಂದಿರ ಸಮೀಪ 12 ಸ್ಟಾಲ್ ಗಳನ್ನು ತೆರೆದಿತ್ತು.
ನಾಸಿಕ್ ನ ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕಿಲೋ ಈರುಳ್ಳಿಯನ್ನು 65 ರೂ.ಗೆ ಖರೀದಿಸಿದ್ದು, ಅದೇ ಬೆಲೆಗೆ ಮಾರಾಟ ಮಾಡಿರುವುದಾಗಿ ಮಹಿಳಾ ಸಂಘಟನೆಯ ಮುಖ್ಯಸ್ಥೆ ನೀನಾ ತಿವಾರಿ ತಿಳಿಸಿದ್ದಾರೆ.
ಕೆಜಿ ಈರುಳ್ಳಿಗೆ 65 ರೂ.; ನಾಲ್ಕೇ ಗಂಟೆಯಲ್ಲಿ 800 ಕೆಜಿ ಮಾರಾಟ!
Follow Us