ಅಹಮದಾಬಾದ್; ಜಮ್ಮು ಕಾಶ್ಮೀರದ ಜನರು ಅಂತರ್ಜಾಲ ಸೇವೆಯನ್ನು ‘ಕೆಟ್ಟ ಚಿತ್ರ’ಗಳನ್ನು ವೀಕ್ಷಿಸಲು ಮಾತ್ರ ಬಳಸುತ್ತಿದ್ದರು ಎಂದು ವಿಜ್ಞಾನಿ ಹಾಗೂ ನೀತಿ ಆಯೋಗದ ಸದಸ್ಯ ವಿ.ಕೆ.ಸಾರಸ್ವತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಲ್ಲಿನ ಜನರು ಇಂಟರ್ ನೆಟ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ತಪ್ಪು ಸಂದೇಶಗಳು ರವಾನೆಯಾಗುತ್ತಿದ್ದವು. ಆ ಪ್ರದೇಶದ ಅಭಿವೃದ್ಧಿಗೆ ಅಂತರ್ಜಾಲ ಸೇವೆಯ ಕಡಿತವನ್ನು ಮುಂದುವರಿಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.