ದೆಹಲಿ: ಹೊಸ ವರ್ಷದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಟಿಎಂಗಳಲ್ಲಿ ರಾತ್ರಿ 8 ರಿಂದ ಬೆಳಗ್ಗೆ 8 ರವರೆಗೆ ಒಟಿಪಿ (ಒನ್ ಟೈಮ್ ಪಾಸ್ವರ್ಡ್) ವ್ಯವಸ್ಥೆ ಜಾರಿ ಮಾಡಲಿದೆ.
ಹೀಗಾಗಿ ಇನ್ಮುಂದೆ ರಾತ್ರಿ ಎಸ್ಬಿಐ ಎಟಿಎಂಗಳಲ್ಲಿ ಕ್ಯಾಶ್ ವಿಥ್ ಡ್ರಾ ಮಾಡಲು ರಿಜಿಸ್ಟರ್ ಮಾಡಲಾದ ಮೊಬೈಲ್ ನಂಬರ್ ಅಗತ್ಯ. ಹತ್ತು ಸಾವಿರ ರೂ.ಗಿಂತ ಹೆಚ್ಚಿನ ಹಣ ಪಡೆಯಲು ಈ ಹೊಸ ವಿಧಾನ ಅನ್ವಯವಾಗಲಿದೆ.
ಅನಧಿಕೃತ ವಹಿವಾಟುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಸ್ಬಿಐ ಈ ವ್ಯವಸ್ಥೆ ಜಾರಿ ಮಾಡುತ್ತಿದೆ. ಈ ವ್ಯವಸ್ಥೆ ರಾತ್ರಿ 8 ರಿಂದ ಬೆಳಗ್ಗೆ 8 ರ ಅವಧಿಯ ವಹಿವಾಟುಗಳಿಗೆ ಬ್ಯಾಂಕ್ನಲ್ಲಿ ನೋಂದಣಿಯಾಗಿರುವ ಮೊಬೈಲ್ ನಂಬರ್ಗೆ ಒಟಿಪಿ ಕಳುಹಿಸಲಾಗುತ್ತದೆ. ಈ ಒಟಿಪಿ ಬಳಸಿಕೊಂಡು ಹಣ ವಿತ್ಡ್ರಾ ಮಾಡಬಹುದು. ಅನ್ಯ ಬ್ಯಾಂಕ್ಗಳ ಎಟಿಎಂನಿಂದ ಹಣ ಡ್ರಾ ಮಾಡುವಾಗ ಒಟಿಪಿ ವ್ಯವಸ್ಥೆ ಇರುವುದಿಲ್ಲ.
SBI ಎಟಿಎಂಗಳಲ್ಲಿ ರಾತ್ರಿ ವೇಳೆ ಒಟಿಪಿ ಸಿಸ್ಟಮ್
Follow Us