ನವದೆಹಲಿ: ಎಐಎಂಐಎಂ ನಾಯಕ ಅಸಾಬುದ್ದೀನ್ ಓವೈಸಿ ಕೂಡ ಮುಂದೊಂದು ದಿನ “ಹನುಮಾನ್ ಚಾಲಿಸವನ್ನು ಪಠಿಸುತ್ತಾರೆ” ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿ ವಿಧಾನಸಭೆಯ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಅವರು, ಸೋಮವಾರ ಕೇಜ್ರೀವಾಲ್ ಹನುಮಾನ್ ಚಾಲಿಸ ಪಠಿಸಿದ್ದನ್ನು ಪ್ರಸ್ತಾಪಿಸಿ, “ಇದು ಆರಂಭ ಅಷ್ಟೇ. ಮುಂದಿನ ದಿನಗಳಲ್ಲಿ ನೋಡುತ್ತಿರಿ, ಏನಾಗುತ್ತೆ ಅಂತ. ಓವೈಸಿ ಕೂಡ ಮಂತ್ರ ಪಠಿಸುತ್ತಾರೆ. ಇದು ಖಚಿತ” ಎಂದಿದ್ದಾರೆ.