NEWSICS.COM
ನವದೆಹಲಿ: ಇತ್ತಿಚೆಗಷ್ಟೆ ನಾನು ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಹೇಳಿಕೊಂಡ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಈಗ ತಾನು ಪಂದ್ಯಕ್ಕೆ ತಯಾರಾಗಿದ್ದೇನೆ ಎಂದಿದ್ದಾರೆ.
ಈಗ ಸಂಪೂರ್ಣವಾಗಿ ಆರೋಗ್ಯದಲ್ಲಿಯೂ ಪಿಟ್ ಆಗಿದ್ದೇನೆ, ಏಷ್ಯಾ ಟೂರ್ನಮೆಂಟ್ ಗಳಲ್ಲಿ ಆಡಲು ಉತ್ಸುಕಳಾಗಿದ್ದೇನೆ, ಆಟಕ್ಕೆ ಸಿದ್ದವಾಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ದೈನಂದಿನ ಬದುಕನ್ನು ತಕ್ಷಣಕ್ಕೆ ನಿಲ್ಲಿಸಬೇಕಾದಾಗ ಕಷ್ಟವಾಗಿತ್ತು. ನಮ್ಮ ಬಗ್ಗೆ ನಾವು ಗಮನ ನೀಡುವುದು ಎಷ್ಟು ಮುಖ್ಯ ಎಂದು ಆ ಸಮಯದಿಂದ ಅರ್ಥವಾಗಿದೆ ಎಂದಿದ್ದಾರೆ.