newsics.com
ತಿರುಪತಿ: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಪಡೆದಿರುವ ಪಿ ವಿ ಸಿಂಧು ಇಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.
ಪದಕ ಪಡೆದಿರುವ ಹಿನ್ನೆಲೆಯಲ್ಲಿ ತಿಮ್ಮಪ್ಪನ ಸನ್ನಿದ್ಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ವಿಶಾಖಪಟ್ಟಣಂ ನಲ್ಲಿ ತರಬೇತಿ ಶಾಲೆಯೊಂದನ್ನು ಆರಂಭಿಸಲು ಇಚ್ಚಿಸುತ್ತಿರುವುದಾಗಿ ಪಿ ವಿ ಸಿಂಧು ಇದೇ ಸಂದರ್ಭದಲ್ಲಿ ತಿಳಿಸಿದರು.
ಇದೇ ವೇಳೆ ಅಮಾನತುಗೊಂಡಿರುವ ಮಹಿಳಾ ಕುಸ್ತಿಪಟು ವಿನೇಶ್ ಪೊಗಟ್ ಬಹಿರಂಗವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲರೂ ನನ್ನ ಕ್ರೀಡಾ ಬದುಕು ಕೊನೆಗೊಳಿಸಲು ಹಿಂದಿನಿಂದ ಚೂರಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಅಶಿಸ್ತಿನ ವರ್ತನೆಗಾಗಿ ಭಾರತೀಯ ಕುಸ್ತಿ ಫೆಡರೇಷನ್ ಅವರನ್ನು ಅಮಾನತು ಮಾಡಿದೆ.