newsics.com
ನವದೆಹಲಿ: ಪದ್ಮಶ್ರೀ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಉರ್ದು ಕವಿ, ವಿಮರ್ಶಕ ಶಂಸುರ್ರಹ್ಮಾನ್ ಫಾರೂಕಿ (85) ಅವರು ಶುಕ್ರವಾರ (ಡಿ.25) ಅಲಹಾಬಾದ್ನ ತನ್ನ ಸ್ವಗೃಹದಲ್ಲಿ ಕೊನೆಯುಸಿರೆಳೆದರು.
ಕಳೆದ ತಿಂಗಳಷ್ಟೇ ಅವರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದರು. ಅಲಹಾಬಾದ್ನ ನಿವಾಸಕ್ಕೆ ಹಿಂದಿರುಗುವಂತೆ ಅವರು ಸೂಚಿಸಿದ್ದರು. ನಾವು ಇಂದು ಬೆಳಗ್ಗೆಯಷ್ಟೇ ಇಲ್ಲಿಗೆ ತಲುಪಿದೆವು. ಇಲ್ಲಿಗೆ ಆಗಮಿಸಿದ ಅರ್ಧ ಗಂಟೆಯಲ್ಲಿ ಸುಮಾರು 11 ಗಂಟೆಗೆ ಅವರು ನಿಧನರಾದರು ಎಂದು ಫಾರೂಕಿ ಅವರ ಸೋದರಳಿಯ ಹಾಗೂ ಲೇಖಕ ಮಹಮೂದ್ ಫಾರೂಕಿ ಹೇಳಿದ್ದಾರೆ.
ಕೊರೋನಾದಿಂದ ಚೇತರಿಸಿಕೊಂಡಿದ್ದ ಅವರು,ನವೆಂಬರ್ 23ರಂದು ದೆಹಲಿಯ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆದರೆ, ಸ್ಟಿರಾಯ್ಡಿನಿಂದಾಗಿ ಅವರಲ್ಲಿ ಶಿಲೀಂದ್ರ ಸೋಂಕು ಅಭಿವೃದ್ಧಿಯಾಯಿತು. ಇದು ಅವರ ಆರೋಗ್ಯವನ್ನು ಮತ್ತಷ್ಟು ಹದಗೆಡಿಸಿತು” ಎಂದು ಮಹಮೂದ್ ಹೇಳಿದ್ದಾರೆ.
ಫಾರೂಕಿ ಅವರು 16ನೇ ಶತಮಾನದ ಉರ್ದು ಮೌಖಿಕ ಕಥೆ ಹೇಳುವ ಕಲಾ ಪ್ರಕಾರವಾದ ದಸ್ತಾಂಗೋಯಿಯನ್ನು ಪುನರುಜ್ಜೀವನಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ‘ಮಿರರ್ ಆಫ್ ಬ್ಯೂಟಿ'(2006), ‘ಗಾಲಿಬ್ ಅಫ್ಸಾನೇ ಕಿ ಹಿಮಾಯತ್ ಮೈನ್'(1989) ಹಾಗೂ ‘ದ ಸನ್ ದ್ಯಾಟ್ ರೋಸ್ ಫ್ರಂ ದಿ ಅರ್ಥ್’ (2014) ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. 18ನೇ ಶತಮಾನದ ಕವಿ ಮಿರ್ ತಖಿ ಮಿರ್ ಕುರಿತ ಸಂಶೋಧನಾ ಗ್ರಂಥ ‘ಶೇರ್-ಎ-ಶೋರ್- ಅಂಗೇಝ್ಗೆ ಅವರು 1996ರಲ್ಲಿ ಸರಸ್ವತಿ ಸಮ್ಮಾನಕ್ಕೆ ಭಾಜನರಾಗಿದ್ದರು.
ಹೆಲಿಪ್ಯಾಡ್ ಅಗೆದ ರೈತರು; ಡಿಸಿಎಂ ಭೇಟಿ ರದ್ದು
ಹೊಸ ಕೊರೋನಾ ವೈರಸ್’ನಿಂದ ನಿರೀಕ್ಷೆ ಮೀರಿ ಹೆಚ್ಚಲಿದೆ ಸಾವು- ಅಧ್ಯಯನ