Saturday, January 23, 2021

ಸಾಮಾಜಿಕ ಕಾರ್ಯಕರ್ತ, ಪದ್ಮಶ್ರೀ ಪುರಸ್ಕೃತ ಪ್ರಕಾಶ್ ರಾವ್ ಇನ್ನಿಲ್ಲ

newsics.com

ಒಡಿಶಾ: ಚಹಾ ಮಾರಾಟ ಮಾಡಿ ಬಡ ಮಕ್ಕಳಿಗೆ ಶಿಕ್ಷಣ ಧಾರೆ ಎರೆದಿದ್ದ ಖ್ಯಾತ ಸಾಮಾಜ ಸೇವಕ, ಪದ್ಮಶ್ರೀ ಪುರಸ್ಕೃತ ಡಿ. ಪ್ರಕಾಶ್ ರಾವ್ (62) ಬುಧವಾರ ಕೊನೆಯುಸಿರೆಳೆದರು. ಅವರಿಗೆ 2019ರಲ್ಲಿ ಭಾರತದ ಅತ್ಯುನ್ನತ ಗೌರವ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿಗೆ ಒಳಗಾಗಿದ್ದು, ಬ್ರೇನ್ ಸ್ಟ್ರೋಕ್’ನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಎಸ್ಸಿಬಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾದರು.
54 ವರ್ಷಗಳ ಕಾಲ ಟೀ ಮಾರಾಟ ಮಾಡಿ ಸಮಾಜಸೇವೆ ಮಾಡುತ್ತಿದ್ದ, ಶೈಕ್ಷಣಿಕ ಕ್ರಾಂತಿಗೆ ಕಾರಣರಾಗಿದ್ದ ಪ್ರಕಾಶ್ ರಾವ್ ಅವರ ಕಾರ್ಯದ 44ನೇ ‘ಮನ್ ಕೀ ಬಾತ್‘ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದರು.
ಇವರು ಆಶಾ ಅಶ್ವವಾಸನ್ ಎಂಬ ಶಾಲೆ ತೆರೆದು, ಕೊಳಚೆ ಮತ್ತು ಅನಾಥ ಮಕ್ಕಳಲ್ಲಿ ಶಿಕ್ಷಣದ ಮೌಲ್ಯ ಉತ್ತೇಜಿಸಿದ್ದರಿಂದ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು.

48 ಸಾವಿರ ಕೋಟಿ ರೂ.ಗಳ ತೇಜಸ್ ವಿಮಾನ ಒಪ್ಪಂದಕ್ಕೆ ಕೇಂದ್ರ ಅನುಮೋದನೆ

ಮತ್ತಷ್ಟು ಸುದ್ದಿಗಳು

Latest News

ಒಂದೇ ದಿನ 14,256 ಜನರಿಗೆ ಕೊರೋನಾ ಸೋಂಕು,152 ಮಂದಿ ಸಾವು

Newsics.com ನವದೆಹಲಿ: ದೇಶದಲ್ಲಿ ಕೊರೋನಾದ  ಅಬ್ಬರ ಮುಂದುವರಿದಿದೆ.ಕಳೆದ  24 ಗಂಟೆಯಲ್ಲಿ  14, 256 ಮಂದಿಯಲ್ಲಿ  ಕೊರೋನಾ ಸೋಂಕು ದೃಢಪಟ್ಟಿದೆ.  ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.39,684 ಕ್ಕೆ...

ಪ್ರತಿಭಟನಾ ನಿರತ ರೈತರ ಹತ್ಯೆಗೆ ಸಂಚು: ಆರೋಪಿ ಬಂಧನ

Newsics.com ನವದೆಹಲಿ: ಕೇಂದ್ರದ ಕೃಷಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ರಕ್ತಪಾತ ಹರಿಸಲು ಸಂಚು ಹೂಡಿದ್ದ ಆರೋಪಿಯನ್ನು ರೈತರು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯ ಹೆಸರು...

ಮನೆಗೆ ನುಗ್ಗಿ 15 ವರ್ಷದ ಬಾಲಕಿಯ ಬರ್ಬರ ಹತ್ಯೆ

Newsics.com ಪಾಟ್ನ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅತ್ಯಂತ ದಾರುಣ ಕೃತ್ಯ ನಡೆದಿದೆ. ಮನೆಯೊಂದಕ್ಕೆ ದಾಳಿ ನಡೆಸಿದ ದುಷ್ಕರ್ಮಿಗಳು 15 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ. ಕತ್ತಿಯಿಂದ ಕಡಿದು ಈ ಹತ್ಯೆ ಮಾಡಲಾಗಿದೆ. ಮೃತಪಟ್ಟ ಬಾಲಕಿಯನ್ನು  ಅಂಶು...
- Advertisement -
error: Content is protected !!