newsics.com.
ಶ್ರೀನಗರ: ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸುವ ಪಾಕ್ ಪ್ರೇರಿತ ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಲಾಗಿದೆ.
ಪಾಕ್ ಬೆಂಬಲಿತ ಉಗ್ರ ಸಂಘಟನೆಗಳು ಈ ಸಂಬಂಧ ಮಂದಿರದ ದೃಶ್ಯ ಕಳುಹಿಸಿಕೊಡುವಂತೆ ಸೂಚಿಸಿದ್ದ ಶಂಕಿತ ಭಯೋತ್ಪಾದಕನನ್ನು ಭದ್ರತಾಪಡೆ ಬಂಧಿಸಿದೆ.
ಈ ಮೂಲಕ ದೇಶದಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗುವ ಪಾಕ್ ಸಂಚನ್ನು ವಿಫಲಗೊಳಿಸಲಾಗಿದೆ.
ಪಾಣಿಪತ್ ನಲ್ಲಿರುವ ತೈಲ ಕೇಂದ್ರ ಮತ್ತು ಅಯೋಧ್ಯೆಯ ರಾಮ ಮಂದಿರದ ದೃಶ್ಯಗಳನ್ನು ಕಳುಹಿಸಿಕೊಡುವಂತೆ ಬಂಧಿತ ಶಂಕಿತ ಭಯೋತ್ಪಾದಕನಿಗೆ ಪಾಕ್ ಉಗ್ರ ಸಂಘಟನೆಗಳ ನಾಯಕರು ಸೂಚಿಸಿದ್ದರು ಎಂದು ವರದಿಯಾಗಿದೆ.