newsics.com
ಉತ್ತರ ಪ್ರದೇಶ: ಪಾಕಿಸ್ತಾನಕ್ಕೆ ರಕ್ಷಣಾ ಮಾಹಿತಿ ರವಾನಿಸುತ್ತಿದ್ದ ಆರೋಪದ ಮೇಲೆ ಭಾರತೀಯ ಸೇನಾಪಡೆಯ ವ್ಯಕ್ತಿಯೊಬ್ಬನನ್ನು ಗುರುವಾರ ಬಂಧಿಸಲಾಗಿದೆ.
ಉತ್ತರ ಪ್ರದೇಶದ ರೇವಾರಿಯ ಮಿಲಿಟರಿ ಎಂಜಿನಿಯರಿಂಗ್ ಸರ್ವಿಸಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಕುಮಾರ್ ಬಂಧಿತ ವ್ಯಕ್ತಿ. ಈತ ಪಾಕಿಸ್ತಾನಕ್ಕೆ ಪ್ರಮುಖ ಮಾಹಿತಿ ರವಾನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಎರಡು ವರ್ಷಗಳಿಂದ ಬಂಧಿತ ಮಹೇಶ್ ಪಾಕಿಸ್ತಾನದ ಮಿಲಿಟರಿ ಇಂಟೆಲಿಜೆನ್ಸ್‌ನ ಪ್ರತಿನಿಧಿಗಳ ಜತೆಗೆ ನಿಕಟ ಸಂಪರ್ಕದಲ್ಲಿದ್ದ. ಪಾಕ್‌ನ ಮಹಿಳೆಗೆ ಈತ ನೀಡುತ್ತಿದ್ದ ಮಾಹಿತಿಗೆ ತಕ್ಕಂತೆ ಹಣವೂ ಪಾವತಿಯಾಗುತ್ತಿತ್ತು. ಮಹೇಶ್ ಕುಮಾರ್ ಪಾಕ್ ನ ಮಹಿಳೆಯನ್ನು ಮೇಡಂ ಎಂದೇ ಕರೆಯುತ್ತಿದ್ದ ಎಂದು ತಿಳಿದುಬಂದಿದೆ.
ಹಿಂದು ಮಹಾಸಾಗರದಲ್ಲಿ ಪತ್ತೆಯಾಗಿದ್ದ ಚೀನಾ ನೌಕೆ; ಎಚ್ಚರಿಕೆ ಬಳಿಕ ವಾಪಸ್
ಕುಮಾರ್ ತನ್ನ ಮೊಬೈಲ್ ಮೂಲಕ ಸೂಕ್ಷ್ಮ ಮಾಹಿತಿಗಳನ್ನು ರವಾನಿಸುತ್ತಿದ್ದ ವಿಚಾರ ಕಳೆದ ಜೂನ್‌ನಲ್ಲೆ ಲಕ್ನೋದ ಮಿಲಿಟರಿ ಗುಪ್ತಚರ ವಿಭಾಗಕ್ಕೆ ತಿಳಿದಿತ್ತು. ಆಗಿನಿಂದಲೇ ಮಹೇಶ್ ಕುಮಾರ್ ಮೇಲೆ ತೀವ್ರ ನಿಗಾ ಇರಿಸಿದ್ದ ಮಿಲಿಟರಿ ಗುಪ್ತಚರ ವಿಭಾಗ ಗುರುವಾರ ಆತನನ್ನು ಬಂಧಿಸಿದೆ.
ಹೈಬ್ರಿಡ್ ವಾರ್; ಚೀನಾದ ಝೆನ್‌ಹುವಾ ಡಾಟಾ ಕಂಪನಿಗೆ ಫೇಸ್‌ಬುಕ್ ನಿಷೇಧ