newsics.com
ಮುಂಬೈ: ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆತ್ಮಹತ್ಯೆಯೊಂದಿಗೆ ಶುರುವಾದ ತನಿಖೆ ಡ್ರಗ್ಸ್ ಜಾಲದೊಂದಿಗೆ ನಂಟು ಹೊಂದಿತ್ತು. ಮುಂಬಯಿಗೆ ಸರಬರಾಜು ಆಗುತ್ತಿದ್ದ ಈ ಮಾದಕ ದ್ರವ್ಯಗಳು ಪಾಕಿಸ್ತಾನದೊಂದಿಗೆ ನಂಟು ಹೊಂದಿರುವ ಸಾಧ್ಯತೆ ಇದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ (NCB) ತಿಳಿಸಿದೆ.
ಡ್ರಗ್ಸ್ ಆಯಾಮದ ಕುರಿತು ತನಿಖೆ ನಡೆಸಿರುವ ಘಟಕಕ್ಕೆ ಬಾಲಿವುಡ್ ಮತ್ತು ಮುಂಬೈಗೆ ಕೊಕೇನ್ ಮತ್ತು ಇನ್ನಿತರ ಡ್ರಗ್ಸ್ಗಳು ಪಂಜಾಬ್ನ ಅಮೃತಸರ ಮತ್ತು ಪಾಕಿಸ್ತಾನದಿಂದ ಸರಬರಾಜು ಆಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಡ್ರಗ್ ಪೆಡ್ಲರ್ಗಳ ಹಿಂದೆ ಯಾರಿದ್ದಾರೆ. ಎಲ್ಲಿಂದ ಇವುಗಳ ಸರಬರಾಜು ಆಗುತ್ತಿದೆ. ಯಾರು ನಿರ್ವಹಣೆ ಮಾಡುತ್ತಿದ್ದಾರೆ ಎಂಬ ಆಯಾಮದಲ್ಲಿ ತನಿಖೆ ನಡೆಸಲಾಗಿದೆ. ಅಷ್ಟೇ ಅಲ್ಲ, ಈ ಘಟನೆಯಲ್ಲಿ ಯಾರು ಭಾಗಿಯಾಗಿದ್ದಾರೆ. ಈ ಮಾದಕ ವಸ್ತುಗಳನ್ನು ಯಾರಿಗೆ ಸರಬರಾಜು ಮಾಡಲಾಗುತ್ತಿತ್ತು ಎಂಬ ಬಗ್ಗೆಯೂ ಅಧಿಕಾರಿಗಳಿಗೆ ತಿಳಿದಿದೆ ಎನ್ನಲಾಗಿದೆ.
ತನಿಖೆಯ ಕೇಂದ್ರ ಬಿಂದುವಾಗಿರುವ ಅಮೃತಸರ ಜತೆಗಿನ ನಂಟಿನ ಕುರಿತು ತನಿಖೆ ನಡೆಸಲಾಗುತ್ತಿದೆ. ಇದಕ್ಕಾಗಿ ಎನ್ಸಿಬಿ ಯುಎಸ್, ಯುಕೆ ಮತ್ತು ಆಸ್ಟ್ರೇಲಿಯಾ ಏಜೆನ್ಸಿ ಸಂಪರ್ಕ ಪಡೆಯಲಿದೆ ಎಂದು ತಿಳಿದುಬಂದಿದೆ. 2018ರಲ್ಲಿ 1,200 ಕಿ.ಗ್ರಾನಷ್ಟು ಕೊಕೈನ್ ಭಾರತಕ್ಕೆ ಪೂರೈಕೆಯಾಗಿದ್ದು, ಇದರಲ್ಲಿ 300 ಗ್ರಾನಷ್ಟು ಮುಂಬೈಗೆ ಸರಬರಾಜಾಗಿದೆ. ಭಾರತಕ್ಕೆ ಅಂದಾಜು ಒಂದು ಟನ್ ಅಫ್ಘಾನ್ ಹೆರಾಯಿನ್ ಸರಬರಾಜಾಗುತ್ತಿದ್ದು, ಪಂಜಾಬ್ (ಪಾಕಿಸ್ತಾನದಿಂದ) ಅಥವಾ ಗುಜರಾತ್ ಸಮುದ್ರ ಮಾರ್ಗದಿಂದ ಮುಂಬೈ ಸೇರುತ್ತಿದೆ. ಪಾಕಿಸ್ತಾನದ ಕೆಲ ರಾಜ್ಯಗಳು ಈ ಮಾದಕ ದ್ರವ್ಯದ ಹಣವನ್ನು ಭಯೋತ್ಪಾದಕ ನಿಧಿಗೆ ಬಳಸುತ್ತಿವೆ ಎಂದು ಹೇಳಲಾಗಿದೆ.
ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಪಾಕ್ ನಂಟು!
Follow Us