ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯ ರಾಮ್ ಜನ್ಮ ಭೂಮಿಯಲ್ಲಿ ಆಗಸ್ಟ್ 15 ರಂದು ಭಯೋತ್ಪಾದಕ ದಾಳಿ ನಡೆಸಲು ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್ಐ ಯೋಜಿಸುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಗುಪ್ತಚರ ಸಂಸ್ಥೆಗಳ ಮೂಲಗಳು ಮಂಗಳವಾರ (ಜುಲೈ 28) ಈ ಮಾಹಿತಿ ಬಹಿರಂಗಪಡಿಸಿವೆ. ಭಯೋತ್ಪಾದಕ ಗುಂಪು ಪ್ರತ್ಯೇಕ ದಾಳಿ ನಡೆಸಬೇಕೆಂದು ಪಾಕಿಸ್ತಾನ ಬಯಸಿದೆ. ಅದು ಭಾರತದೊಳಗಿನ ಆಂತರಿಕ ದಾಳಿಯಂತೆ ಕಂಡುಬರುವ ರೀತಿ ಇರಬೇಕೆಂದು ಪಾಕಿಸ್ತಾನ ಬಯಸಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆ ಬಹಿರಂಗಪಡಿಸಿದೆ.
ಗುಪ್ತಚರ ಸಂಸ್ಥೆ ಆರ್ & ಎಡಬ್ಲ್ಯೂ (ರಾ) ಪ್ರಕಾರ, ಐಎಸ್ಐ ಅಫ್ಘಾನಿಸ್ತಾನದ ಲಷ್ಕರ್ ಮತ್ತು ಜೈಶ್ ಭಯೋತ್ಪಾದಕರಿಗೆ ದಾಳಿ ನಡೆಸಲು ತರಬೇತಿ ನೀಡುತ್ತಿದೆ ಎನ್ನಲಾಗಿದೆ. ಈ ದಾಳಿಗೆ ಅಯೋಧ್ಯೆಯಲ್ಲಿ ಮೂರರಿಂದ ಐದು ಗುಂಪುಗಳ ಭಯೋತ್ಪಾದಕರನ್ನು ಕಳುಹಿಸಲು ಪಾಕಿಸ್ತಾನ ಸಂಸ್ಥೆ ಯೋಜಿಸಿದೆ ಎಂದು ಗುಪ್ತಚರ ಸಂಸ್ಥೆ ಮೂಲಗಳು ತಿಳಿಸಿವೆ.
ಭಯೋತ್ಪಾದಕ ಗುಂಪು ಪ್ರತ್ಯೇಕ ದಾಳಿ ನಡೆಸಬೇಕೆಂದು ಪಾಕಿಸ್ತಾನ ಬಯಸಿದೆ ಮತ್ತು ಅದು ಭಾರತದೊಳಗಿನ ಆಂತರಿಕ ದಾಳಿಯಂತೆ ಕಂಡುಬರಲು ರೂಪಿಸಿದೆ ಎಂದು ಗುಪ್ತಚರ ಸಂಸ್ಥೆ ಬಹಿರಂಗಪಡಿಸಿದೆ.
ಈ ಮಧ್ಯೆ, ದೆಹಲಿ, ಅಯೋಧ್ಯೆ ಮತ್ತು ಕಾಶ್ಮೀರದ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲು ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ. ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಗೆ ಅಡಿಪಾಯ ಹಾಕಲಿದ್ದಾರೆ. 2019 ರಲ್ಲಿ ಸೆಕ್ಷನ್ 370 ಅನ್ನು ಕಾಶ್ಮೀರದಿಂದ ತೆಗೆದುಹಾಕಿದ ದಿನವೂ ಆ.15 ಆಗಿದೆ.
ಆ.15ರಂದು ಅಯೋಧ್ಯೆಯಲ್ಲಿ ದಾಳಿಗೆ ಪಾಕ್ ಉಗ್ರರ ಸಂಚು
Follow Us