ದೆಹಲಿ: ಬೇರೆ ಧರ್ಮದ ಆಟಗಾರನಾಗಿದ್ದ ಕಾರಣಕ್ಕೆ ಮಾಜಿ ಲೆಗ್ಸ್ಪಿನ್ನರ್ ದಿನೇಶ್ ಕನೇರಿಯಾ ಆವರನ್ನು ಬಹಳ ಕೀಳಾಗಿ ಕಾಣಲಾಗುತ್ತಿತ್ತು ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಎಂದು ಹೇಳಿದ್ದಾರೆ.
ಚಾಟ್ ಶೋ ಕಾರ್ಯಕ್ರಮದಲ್ಲಿ ಶೋಯೆಬ್ ಅವರು, ಪಾಕ್ನಲ್ಲಿ ಹಿಂದುಗಳ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ.
2005ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದಿನೇಶ್ ಕನೇರಿಯಾ ನಮಗೆ ಟೆಸ್ಟ್ ಸರಣಿಯನ್ನು ಗೆಲ್ಲಿಸಿಕೊಟ್ಟಿದ್ದರು. ಹಾಗಿದ್ದರೂ ಅವರನ್ನು ಕೀಳಾಗಿ ನೋಡಿದ್ದಕ್ಕೆ ಸಹ ಆಟಗಾರರಿಗೆ ನಾನು ಬೈಯ್ದಿದ್ದೆ ಎಂದು ಅಖ್ತರ್ ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿದ್ದರೂ, ಹಿಂದು ಎನ್ನುವ ಕಾರಣಕ್ಕಾಗಿ ಅವರನ್ನು ಕೀಳಾಗಿ ನೋಡುತ್ತಿರಬೇಕಾದರೆ, ಪಾಕಿಸ್ತಾನದಲ್ಲಿ ಇರುವ ಸಾಮಾನ್ಯ ಹಿಂದುಗಳ ಸ್ಥಿತಿ ಯಾವ ರೀತಿ ಇರಬೇಡ ಎಂದು ಪ್ರಶ್ನಿಸಿದ್ದಾರೆ. ಅವರೊಂದಿಗೆ ಕುಳಿತು ಊಟ ಮಾಡಲೂ ಸಹ ಆಟಗಾರರು ನಿರಾಕರಿಸುತ್ತಿದ್ದರು ಎಂದಿದ್ದಾರೆ.
ಅಖ್ತರ್ ಹೇಳಿದ್ದು ಸತ್ಯ ಎಂದು ಕನೇರಿಯಾ ಕೂಡ ಒಪ್ಪಿದ್ದು, ಹೀಗೆ ಕೀಳಾಗಿ ಕಂಡ ಆಟಗಾರರ ಹೆಸರನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ. ಪಾಕ್ ಪರವಾಗಿ ಆಡಿದ ಕೆಲ ಹಿಂದುಗಳಲ್ಲಿ ಕನೇರಿಯಾ ಒಬ್ಬರಾಗಿದ್ದು, 61 ಟೆಸ್ಟ್ ಆಡಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಕನೇರಿಯಾ ಅವರಿಗೆ ನಿಷೇಧ ಹೇರಿದೆ.
ಪಾಕ್ ಆಟಗಾರರು ಕನೇರಿಯ ಜತೆ ಊಟ ಕೂಡ ಮಾಡ್ತಿರ್ಲಿಲ್ಲ- ಶೋಯಬ್
Follow Us