ಮುಂಬೈ: ಏಷ್ಯಾ ಇಲೆವೆನ್ ಮತ್ತು ವಿಶ್ವ ಇಲೆವೆನ್ ನಡುವಿನ ಎರಡು ಟಿ20 ಪಂದ್ಯಗಳಲ್ಲಿ ಪಾಕ್ ಆಟಗಾರರನ್ನು ಕೈಬಿಡಲಾಗಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮಾರ್ಚ್ ನಲ್ಲಿ ವಿಶ್ವ ಇಲೆವೆನ್ ಮತ್ತು ಏಷ್ಯಾ ಇಲೆವೆನ್ ನಡುವೆ ಎರಡು ಟಿ20 ಪಂದ್ಯ ಆಯೋಜಿಸುತ್ತಿದೆ. ಈ ಪಂದ್ಯಗಳಲ್ಲಿ ಯಾವುದೇ ಪಾಕ್ ಆಟಗಾರನೂ ಭಾಗವಹಿಸುತ್ತಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಏಷ್ಯಾ ಇಲೆವೆನ್ ತಂಡದಲ್ಲಿ ಯಾವುದೇ ಪಾಕ್ ಆಟಗಾರನಿಗೂ ಆಹ್ವಾನ ನೀಡದಂತೆ ಮಾಡುವಲ್ಲಿ ಭಾರತ ಕ್ರಿಕೆಟ್ ಮಂಡಳಿ ಯಶಸ್ವಿಯಾಗಿದೆ. ಇನ್ನು ಏಷ್ಯಾ ಇಲೆವೆನ್ ನಲ್ಲಿ ಐವರು ಭಾರತೀಯ ಆಟಗಾರರು ಸ್ಥಾನ ಪಡೆಯಲಿದ್ದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಟಿ20 ಪಂದ್ಯಗಳಲ್ಲಿ ಪಾಕ್ ಆಟಗಾರರಿಲ್ಲ- ಬಿಸಿಸಿಐ
Follow Us