newsics.com
ನವದೆಹಲಿ: ಪಾಕಿಸ್ತಾನವು ರಾತ್ರಿ ವೇಳೆ ನಿಯಂತ್ರಣ ರೇಖೆಯನ್ನು ಅತಿಕ್ರಮಿಸಿ ಭಯೋತ್ಪಾದಕರಿಗೆ ಎಕೆ-47ನಂತಹ ಶಸ್ತ್ರಾಸ್ತ್ರಗಳನ್ನು ಪೂರೈಸಲು ಡ್ರೋನ್‌ಗಳನ್ನು ಬಳಸುತ್ತಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಗಡಿಯಿಂದ 12 ಕಿ.ಮೀ.ದೂರದಲ್ಲಿರುವ ಅಖ್ನೂರ್‌ನ ಝಡ್ ಸೋಹಲ್ ಗ್ರಾಮದಲ್ಲಿ ಕಳೆದ ರಾತ್ರಿ ಅಸಾಲ್ಟ್ ರೈಫಲ್‌ಗಳು ಮತ್ತು ಒಂದು ಪಿಸ್ತೂಲು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಮ್ಮು ಕಾಶ್ಮೀರದ ಬದ್ಗಾಂನಲ್ಲಿ ಎನ್ ಕೌಂಟರ್
ಅಖ್ನೂರ್ ಗ್ರಾಮದಲ್ಲಿ ಪಾಕಿಸ್ತಾನಿ ಡ್ರೋನ್ ರಾತ್ರಿ ವೇಳೆ ಶಸ್ತ್ರಾಸ್ತ್ರಗಳನ್ನು ಬೀಳಿಸಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ಎರಡು ಎಕೆ ಅಸಾಲ್ಟ್ ರೈಫಲ್‌ಗಳು, ಒಂದು ಪಿಸ್ತೂಲು, ಮೂರು ಎಕೆ ಮ್ಯಾಗಝಿನ್‌ಗಳು ಮತ್ತು 90 ಸುತ್ತು ಗುಂಡುಗಳು ಪತ್ತೆಯಾಗಿವೆ. ಇವು ಕಾಶ್ಮೀರ ಕಣಿವೆಯಲ್ಲಿನ ಭಯೋತ್ಪಾದಕರಿಗೆ ತಲುಪಲಿದ್ದವು ಎಂದು ಜಮ್ಮುವಿನ ಹಿರಿಯ ಪೊಲೀಸ್ ಅಧಿಕಾರಿ ಶ್ರೀಧರ ಪಾಟೀಲ ತಿಳಿಸಿದ್ದಾರೆ.
ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಪಾಕ್ ನಂಟು!