Thursday, May 26, 2022

ಪಾಕಿಸ್ತಾನದ 35 ಯೂಟ್ಯೂಬ್‌ ಚಾನೆಲ್‌ ಬ್ಲಾಕ್‌

Follow Us

newsics.com

ನವದೆಹಲಿ: ಭಾರತ ವಿರೋಧಿ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ಪಾಕ್‌ನ 35 ಯೂಟ್ಯೂಬ್‌ ಚಾನೆಲ್‌, ಎರಡು ಟ್ವಿಟ್ಟರ್‌ ಖಾತೆ, ಎರಡು ಇನ್‌ಸ್ಟಾಗ್ರಾಮ್‌ ಖಾತೆ, ಎರಡು ವೆಬ್‌ಸೈಟ್‌ ಮತ್ತು ಫೇಸ್‌ಬುಕ್‌ ಖಾತೆಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬ್ಲಾಕ್‌ ಮಾಡಿದೆ.

ಈ ಎಲ್ಲಾ ಖಾತೆಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದವು. ಭಾರತ ವಿರೋಧಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದವು ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್‌ ಸಹಾಯ್‌ ತಿಳಿಸಿದ್ದಾರೆ.

ಎಲ್ಲಾ ಖಾತೆಗಳನ್ನು ಬ್ಲಾಕ್ ಮಾಡಲು ಟೆಲಿಕಾಂ ಇಲಾಖೆಯ ಮೂಲಕ ಆಯಾ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಮತ್ತು ಇಂಟರ್ನೆಟ್‌ ಸೇವಾ ಪೂರೈಕೆದಾರರಿಗೆ ಸಚಿವಾಲಯ ಆದೇಶ ಹೊರಡಿಸಿದೆ. ನಿರ್ಬಂಧಿಸಲಾದ ಖಾತೆಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳು, ಕಾಶ್ಮೀರ, ಇತರ ದೇಶಗಳೊಂದಿಗೆ ಭಾರತದ ವಿದೇಶಿ ಸಂಬಂಧ, ಮಾಜಿ ಸಿಡಿಎಸ್‌ ಬಿಪಿನ್‌ ರಾವತ್‌ ಅವರ ಸಾವಿಗೆ ಸಂಬಂಧಿಸಿದ ವಿಷಯಗಳಿವೆ  ಎಂದು ಸಚಿವಾಲಯ ತಿಳಿಸಿದೆ.

ರಾಜ್ಯದಲ್ಲಿಂದು 48,049 ಕೋವಿಡ್ ಪ್ರಕರಣ, 18,115 ಮಂದಿ ಗುಣಮುಖ, 22 ಜನ ಸಾವು

ಮತ್ತಷ್ಟು ಸುದ್ದಿಗಳು

Latest News

ಪಾಟಿದಾರ್ ಶತಕದಾಟ: ಕ್ವಾಲಿಫೈಯರ್ 2 ತಲುಪಿದ ಫಾಫ್ ಪಡೆ

newsics.com ಕೋಲ್ಕತ್ತಾ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2022 ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14ರನ್‌ಗಳ ಗೆಲುವು ಸಾಧಿಸಿದೆ. ಮಳೆಯ ಕಾರಣದಿಂದಾಗಿ ಕೊಂಚ ತಡವಾಗಿ...

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಕಲಾವಿದೆ ಅಮ್ರೀನ್‌ ಭಟ್‌ ಎಂದು ಗುರುತಿಸಲಾಗಿದೆ. ಅಮ್ರೀನ್...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...
- Advertisement -
error: Content is protected !!