ಅಮೃತಸರ: ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದ ಬೆನ್ನಲ್ಲೇ ಪಾಕಿಸ್ತಾನದ ಸುಮಾರು 200 ಹಿಂದೂ ಕುಟುಂಬಗಳು ಪಾದಯಾತ್ರೆ ಮೂಲಕ ಭಾರತದತ್ತ ಪ್ರಯಾಣ ಆರಂಭಿಸಿವೆ. ಅಟಾರಿ ಗಡಿ ದಾಟಿ ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಆಗಮಿಸಿರುವ ಈ ಜನರು ಅಲ್ಲಿನ ಭದ್ರತಾ ಸಿಬ್ಬಂದಿಗೆ ಅಚ್ಚರಿ ಮೂಡಿಸಿದ್ದಾರೆ.
ಡಿಸೆಂಬರ್ ತಿಂಗಳ ಮಧ್ಯದಿಂದ ಪಾಕ್ ನ ಹಿಂದೂಗಳು ಪ್ರಯಾಣಿಕರ ವೀಸಾದೊಂದಿಗೆ ಭಾರತಕ್ಕೆ ಆಗಮಿಸಲು ಆರಂಭಿಸಿದ್ದಾರೆ. ಆದರೆ, ಭಾರತಕ್ಕೆ ಆಗಮಿಸಿರುವ ನಿಖರ ಕಾರಣದ ಕುರಿತು ಯಾರೊಬ್ಬರೂ ಇಲ್ಲಿಯವರೆಗೆ ಬಾಯಿಬಿಟ್ಟಿಲ್ಲ ಎಂದು ತಿಳಿದುಬಂದಿದೆ.