ನವದೆಹಲಿ: ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ದೇಶದಲ್ಲಿ ಜಾರಿಗೊಳಿಸಲಾಗಿದ್ದ ಲಾಕ್ ಡೌನ್ ನಿಂದಾಗಿ ಭಾರತದಲ್ಲಿ ಸಿಲುಕಿದ್ದ ಪಾಕಿಸ್ತಾನದ 315 ವಿದ್ಯಾರ್ಥಿಗಳು ಮತ್ತು 100 ನಾಗರಿಕರು ಇಂದು ಸ್ವದೇಶಕ್ಕೆ ತೆರಳಿದರು.
ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಬಂದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪಂಜಾಬಿನ ಅಟ್ಟಾರಿ- ವಾಘಾ ಗಡಿಯ ಮೂಲಕ ಎಲ್ಲ ಪಾಕ್ ನಾಗರಿಕರು ತಮ್ಮ ದೇಶದತ್ತ ಹೆಜ್ಜೆ ಹಾಕಿದರು.
ಕೊರೋನಾದ ವೇಳೆ ಭಾರತ ನೀಡಿದ ಸಹಾಯಕ್ಕೆ ಕೆಲವು ಪಾಕ್ ನಾಗರಿಕರು ಇದೇ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದರು.