Tuesday, April 13, 2021

ಪಳನಿ ಪ್ರೀತಿಯಿಂದ ಕಟ್ಟಿಸಿದ್ದ ಮನೆಯಲ್ಲೀಗ ಕಂಬನಿ…!

     ♦ ಪತ್ನಿಯ ಬಳಿ ‘ಗಾಲ್ವಾನ್​ ಕಣಿವೆಯ ಪರಿಸ್ಥಿತಿ ಹದಗೆಡುತ್ತಿದೆ’ ಎಂದಿದ್ದ ಪಳನಿ     

 ವಿ ಧಿಯೇ ಹಾಗೆ. ನಾವು ಏನೇನೋ ಕನಸು ಕಟ್ಟಿಕೊಳ್ಳುತ್ತೇವೆ. ಆದರೆ ವಿಧಿ ಅದನ್ನೆಲ್ಲ ನುಚ್ಚುನೂರು ಮಾಡಿಬಿಡುತ್ತದೆ. ಹುತಾತ್ಮ ಯೋಧ ಪಳನಿ ಬದುಕಿನಲ್ಲೂ ವಿಧಿ ಅಟ್ಟಹಾಸ ಮೆರೆದಿದೆ.
ಇನ್ನೊಂದು ವರ್ಷ ಕಳೆದಿದ್ದರೆ ಪಳನಿ ತಾವೇ ಕಟ್ಟಿಸಿದ್ದ ಹೊಸ ಮನೆಯಲ್ಲಿ ವಿಶ್ರಾಂತ ಜೀವನ ಕಳೆಯಬೇಕಿತ್ತು. ಆದರೆ ಆದದ್ದೇ ಬೇರೆ. ಭಾರತ- ಚೀನಾ ಗಡಿಯಲ್ಲಿ ಸೋಮವಾರ ತಡರಾತ್ರಿ ನಡೆದ ಸಂಘರ್ಷದಲ್ಲಿ ಭಾರತದ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ. ಈ ಗುಂಡಿನ ದಾಳಿಯಲ್ಲಿ ತಮಿಳುನಾಡಿನ ಯೋಧ ಕೆ. ಪಳನಿ ಹುತಾತ್ಮರಾಗಿದ್ದಾರೆ.
ಈಗ ಪಳನಿ ಪ್ರೀತಿಯಿಂದ ಕಟ್ಟಿಸಿದ ಮನೆ ಮಾತ್ರ ಇದೆ, ಆದರೆ ಪಳನಿಯೇ ಮನೆಯೊಳಗಿಲ್ಲ. ಈ ಮನೆಯ ಗೃಹಪ್ರವೇಶ ಜೂನ್ 3 ರಂದು ನಡೆಯಿತು. ಈ ಸಮಾರಂಭಕ್ಕೂ ಬರಲಾಗಿರಲಿಲ್ಲ. ನೀವೆಲ್ಲ ಸೇರಿ ಗೃಹಪ್ರವೇಶ ಮಾಡಿ. ನಾನು ಆದಷ್ಟು ಬೇಗ ಮನೆಗೆ ಬರುತ್ತೇನೆ ಎಂದಿದ್ದರು. ಪಳನಿ ಮನೆಗೆ ಬರುತ್ತಿರುವುದೇನೋ ನಿಜ, ಆದರೆ ಜೀವಂತವಾಗಿ ಅಲ್ಲ. ಅದೇ ದುರ್ವಿಧಿ.
ಪಳನಿ ಹೇಳಿದಂತೆಯೇ ಅವರ ಪತ್ನಿ, ಮಕ್ಕಳು, ವೃದ್ಧ ತಂದೆ ತಾಯಿ ಸೇರಿ ಗೃಹಪ್ರವೇಶ ನೆರವೇರಿಸಿದ್ದರು. ಇದರಲ್ಲಿ ಪಳನಿ ಪಾಲ್ಗೊಳ್ಳದ ಕಾರಣ ಮುಂದಿನ ಬಾರಿ ಬಂದಾಗ ಮನೆಯ ಗ್ರಹಪ್ರವೇಶ ಸಂಭ್ರಮಾಚರಣೆ ಹಾಗೂ ಅವರ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಬೇಕೆಂದು ಅವರ ಮನೆಯವರು ಪ್ಲಾನ್ ಮಾಡಿದ್ದರು. ಆದರೆ ಈಗೆಲ್ಲಿಯ ಹುಟ್ಟುಹಬ್ಬ ಆಚರಣೆ? ಸದ್ಯ ಇಲ್ಲೀಗ ಆಗುತ್ತಿರುವುದು ಶೋಕಾಚರಣೆ ಮಾತ್ರ.
ಪಳನಿ ಪತ್ನಿ 35 ವರ್ಷದ ವಸಂತಿ ದೇವಿ, ಮಗ ಮತ್ತು ಮಗಳು ಪಳನಿ ಇಲ್ಲದೆ ಕಂಗಾಲಾಗಿದ್ದಾರೆ. ಗಾಲ್ವಾನ್​ ಕಣಿವೆಯ ಸ್ಥಿತಿ ಬಗ್ಗೆ ಪತ್ನಿ ವಸಂತಿದೇವಿ ಬಳಿ ಮಾತನಾಡಿದ್ದ ಯೋಧ ಪಳನಿ, ಇಲ್ಲಿನ ಪರಿಸ್ಥಿತಿ ತುಂಬ ಹದಗೆಡುತ್ತಿದೆ. ನಾನು ಆದಷ್ಟು ಬೇಗ ಮನೆಗೆ ಬರುತ್ತೇನೆ ಎಂದಿದ್ದರು.
ವಯಸ್ಸಾದ ಅಪ್ಪ-ಅಮ್ಮ ಮಗನ ಬರುವಿಕೆಗಾಗಿ ಹೊಸ ಮನೆಯಲ್ಲಿ ಕಾಯುತ್ತಿದ್ದರು. ಅಪ್ಪನೊಡನೆ ಕಾಲ ಕಳೆಯುವ ದಿನ ಹತ್ತಿರ ಬಂತೆಂದು ಮಕ್ಕಳು ಸಂತೋಷದಲ್ಲಿದ್ದರು. ಆದರೆ ಈ ಕಾಯುವಿಕೆಗೆ ಈಗ ಅರ್ಥವೇ ಇಲ್ಲ. ಹೌದು, ವಿಧಿ ನಿಷ್ಕರುಣಿ.
ರೈತನ ಮಗ ಪಳನಿ ಬಿ.ಎ ಪದವೀಧರ. ಪಿಯುಸಿ ಮುಗಿದ ಬಳಿಕ 18ನೇ ವರ್ಷಕ್ಕೆ ಅವರು ಸೇನೆ ಸೇರಿದ್ದರು. ಸೇನೆಯಲ್ಲಿರುವಾಗಲೇ ದೂರಶಿಕ್ಷಣದ ಮೂಲಕ ಬಿಎ ಪದವಿ ಪಡೆದಿದ್ದರು. ತಮ್ಮ ಬಡ ಕುಟುಂಬಕ್ಕೆ ಪಳನಿಯೇ ಆಧಾರವಾಗಿದ್ದರು. ಈಗ ಆಧಾರಸ್ತಂಭವೇ ಕುಸಿದಿದೆ. ಹೌದು, ವಿಧಿಯೇಕೆ ಇಷ್ಟು ಕ್ರೂರಿ?

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!