newsics.com
ನವದೆಹಲಿ: ಕಳೆದ ವರ್ಷ ಡಿಸೆಂಬರ್ನಲ್ಲಿ ಪ್ಯಾರಿಸ್–ನವದೆಹಲಿ ವಿಮಾನದಲ್ಲಿ ನಡೆದಿದ್ದ ಪ್ರಯಾಣಿಕರ ಅಶಿಸ್ತಿನ ಪ್ರಕರಣಗಳ ಕುರಿತಂತೆ ವರದಿ ಮಾಡದ ಹಿನ್ನೆಲೆಯಲ್ಲಿ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ನಿರ್ದೆಶನಾಲಯವು(ಡಿಜಿಸಿಎ) ₹ 10 ಲಕ್ಷ ದಂಡ ವಿಧಿಸಿದೆ.
ಡಿಸೆಂಬರ್ 6, 2022ರಂದು ಪ್ಯಾರಿಸ್ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಎಐ–142 ವಿಮಾನದಲ್ಲಿ ಪ್ರಯಾಣಿಕರು ದುರ್ವರ್ತನೆ ತೋರಿದ್ದಾರೆ ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕನೊಬ್ಬ ನಿಯಮಗಳನ್ನು ಬದಿಗೊತ್ತಿ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದ. ವಿಮಾನದ ಸಿಬ್ಬಂದಿ ಮಾತಿಗೂ ಬೆಲೆ ಕೊಟ್ಟಿರಲಿಲ್ಲ. ಮತ್ತೊಬ್ಬ ಪ್ರಯಾಣಿಕ, ಪಕ್ಕದಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರೊಬ್ಬರು ಶೌಚಕ್ಕೆ ತೆರಳಿದಾಗ, ಅವರ ಖಾಲಿ ಸೀಟಿನಲ್ಲಿ ಮಲಗಿ ಬ್ಲಾಂಕೆಟ್ ಬಳಕೆ ಮಾಡಿದ್ದ.
‘ಈ ಅಶಿಸ್ತಿನ ಘಟನೆಗಳನ್ನು ವರದಿ ಮಾಡದ ಮತ್ತು ಆಂತರಿಕ ಸಮಿತಿಗೆ ಒಪ್ಪಿಸುವಲ್ಲಿ ಮಾಡಿದ ವಿಳಂಬವನ್ನು ಪರಿಗಣಿಸಿದ್ದು,ಇದು ಡಿಜಿಸಿಎ ನಿಯಮಗಳಿಗೆ ವಿರುದ್ಧವಾಗಿದ್ದು, ₹10 ಲಕ್ಷ ದಂಡ ಹಾಕುವ ಮೂಲಕ ಏರ್ ಇಂಡಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ’ಎಂದು ಹೇಳಿದೆ.
ವಿರುದ್ಧವಾಗಿ ಬಂದ ತೀರ್ಪು: ರೊಚ್ಚಿಗೆದ್ದು 40ಕ್ಕೂ ಹೆಚ್ಚು ಬಾರಿ ಕುಡುಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನ