Saturday, April 17, 2021

ಲಾಕ್’ಡೌನ್ ವೇಳೆ ಪಾರ್ಲೆ ಜಿ ಬಿಸ್ಕೆಟ್ ದಾಖಲೆ ಮಾರಾಟ

ನವದೆಹಲಿ: ಲಾಕ್‌ಡೌನ್ ಸಮಯದಲ್ಲಿ ಪಾರ್ಲೆ ಜಿ ಬಿಸ್ಕೆಟ್ ಅತಿ ಹೆಚ್ಚು ಮಾರಾಟವಾಗಿದ್ದು, ಬಿಸ್ಕೆಟ್ ಮಾರಾಟದಲ್ಲಿ 80 ವರ್ಷಗಳ ದಾಖಲೆಯನ್ನು ಮುರಿದಿದೆ.
ಸಾಮಾನ್ಯ ಜನರ ಪಾಲಿಗೆ ಅತ್ಯಂತ ಪ್ರಿಯವಾದ ಪಾರ್ಲೆ ಜಿ ಬಿಸ್ಕೆಟ್ ಈ ಲಾಕ್ ಡೌನ್ ವೇಳೆ ತನ್ನ ಎಂಬತ್ತು ವರ್ಷಗಳ ದಾಖಲೆಯನ್ನು ಮುರಿದಿದೆ.
ನಾವು ನಮ್ಮ ಒಟ್ಟಾರೆ ಮಾರುಕಟ್ಟೆ ಪಾಲನ್ನು ಸುಮಾರು ಶೇ.5 ರಷ್ಟು ಹೆಚ್ಚಿಸಿದ್ದೇವೆ. ಈ ಬೆಳವಣಿಗೆಯ ಶೇ.80–90 ರಷ್ಟು ಪಾರ್ಲೆ ಜಿ ಮಾರಾಟದಿಂದ ಬಂದಿದೆ. ಇದು ಹೊಸ ದಾಖಲೆಯಾಗಿದೆ ಎಂದು ಪಾರ್ಲೆ ಉತ್ಪನ್ನಗಳ ವಿಭಾಗದ ಮುಖ್ಯಸ್ಥ ಮಯಾಂಕ್ ಷಾ ಉಲ್ಲೇಖಿಸಿದ್ದಾರೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಂಪನಿಯು ತಮ್ಮ ಎಂಟು ದಶಕಗಳಲ್ಲಿ ತಮ್ಮ ಅತ್ಯುತ್ತಮ ಮಾರಾಟ ಕಂಡಿದೆ. ಲಾಕ್‌ಡೌನ್ ಸಮಯದಲ್ಲಿ, ಪಾರ್ಲೆ-ಜಿ ಅನೇಕರಿಗೆ ಉತ್ತಮ ಹಾಗೂ ಸುಲಭವಾದ ಆಹಾರವಾಗಿತ್ತು. ಸಾಮಾನ್ಯವಾಗಿ ಬೇರೆ ಏನೂ ಸಿಕ್ಕದವರು – ಪಾರ್ಲೆ-ಜಿ ಖರೀದಿಸಿ ತಿನ್ನುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಭಾರತದಾದ್ಯಂತ 130 ಕಾರ್ಖಾನೆಗಳನ್ನು ಹೊಂದಿದ್ದು, ಅವುಗಳಲ್ಲಿ 120 ನಿರಂತರವಾಗಿ ಉತ್ಪಾದನೆ ನಡೆಸುತ್ತಿದೆ.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!