newsics.com
ಮುಂಬೈ: ಬಾಲಿವುಡ್’ನಲ್ಲಿ ಮತ್ತೊಮ್ಮೆ ಮೀ ಟೂ ಆರೋಪ ಕೇಳಿ ಬಂದಿದೆ. ನಿರ್ಮಾಪಕ, ನಿರ್ದೇಶಕ, ನಟ ಅನುರಾಗ್ ಕಶ್ಯಪ್ ಅವರ ವಿರುದ್ಧ ನಟಿ ಪಾಯಲ್ ಘೋಶ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ಅನುರಾಗ್ ಕಶ್ಯಪ್ ತಳ್ಳಿಹಾಕಿದ್ದಾರೆ.
ಪಾಯಲ್ ಅವರು ಈ ಬಗ್ಗೆ ದೂರು ನೀಡಿದರೆ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ.
ಅನುರಾಗ್ ಅವರು ನನ್ನ ಮುಂದೆ ನಿಂತು ನನ್ನ ಸಲ್ವಾರ್ ಕಮೀಜ್ ತೆಗೆದರು. ಅತ್ಯಾಚಾರವೆಸಗಿದರು. ನಾನು ಧಿಕ್ಕರಿಸಿದಾಗ ಇದೆಲ್ಲವೂ ಮಾಮೂಲಿ, ದೈಹಿಕ ಸುಖ ಪಡೆಯಲು ಒಂದು ಕಾಲ್ ಮಾಡಿದರೆ ಸಾಕು ಎಂದು ನನಗೆ ಹೇಳಿದರು ಎಂದು ಪಾಯಲ್ ಘೋಶ್ ಆರೋಪಿಸಿದ್ದಾರೆ.
ಇದೆಲ್ಲವೂ ಆಧಾರರಹಿತ ಆರೋಪಗಳು, ಮಹಿಳೆಯಾಗಿ ಇತರೆ ಮಹಿಳೆಯರ ಹೆಸರನ್ನು ಈ ಸುಳ್ಳು ಆರೋಪದಲ್ಲಿ ಹೊರ ತಂದಿದ್ದೀರಿ. ನನ್ನ ಮೊದಲ ಪತ್ನಿ, ಎರಡನೇ ಪತ್ನಿ ಅಥವಾ ಪ್ರೇಮಿ ಅಥವಾ ನನ್ನ ಸಿನಿಮಾ ನಟಿ ಅಥವಾ ನಾನು ಬಲ್ಲ ಯಾವುದೇ ನಟಿಯೊಡನೆ ನಾನು ಆ ರೀತಿ ಅಸಭ್ಯವಾಗಿ ನಡೆದುಕೊಂಡಿಲ್ಲ, ಅಂಥ ಕೆಟ್ಟ ಅನುಭವವನ್ನು ಸಹಿಸಲು ಸಾಧ್ಯವೂ ಇಲ್ಲ ಎಂದು ಅನುರಾಗ್ ಕಶ್ಯಪ್ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಬಿಹಾರದ ಕಾಲುವೆ ಮಹಾ ಸಾಧಕನಿಗೆ ಟ್ರ್ಯಾಕ್ಟರ್ ಘೋಷಿಸಿದ ಮಹೀಂದ್ರಾ
ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ?
ಕೊರೋನಾ ಗೆದ್ದ 106 ವರ್ಷದ ಅಜ್ಜಿ!
ಬೆಂಗಳೂರು, ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ