newsics.com
ನವದೆಹಲಿ: ಗೂಗಲ್ ತನ್ನ ಪ್ಲೇ ಸ್ಟೋರ್’ನಿಂದ ಪೇಟಿಎಂ ಆಪ್ ಅನ್ನು ತೆಗೆದುಹಾಕಿದೆ.
ಆದರೆ ಪ್ಲೇ ಸ್ಟೋರ್’ನಲ್ಲಿ ಪೇಟಿಎಂ ಫಾರ್ ಬ್ಯುಸಿನೆಸ್, ಪೇಟಿಎಂ ಫಾರ್ ಮನಿ ಹಾಗೂ ಪೇಟಿಎಂಗೆ ಸಂಬಂಧಿಸಿದ ಇತರ ಆಪ್ ಗಳು ಲಭ್ಯವಿದೆ.
ಆಪಲ್ ಆಪ್ ಸ್ಟೋರ್ ನಲ್ಲಿ ಸದ್ಯ ಪೇಟಿಎಂ ಆಪ್ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ ನಿಂದ ಪೇಟಿಎಂ ತೆಗೆದುಹಾಕಲು ಯಾವುದೇ ನಿರ್ದಿಷ್ಟ ಕಾರಣವನ್ನು ಗೂಗಲ್ ನೀಡಿಲ್ಲ. ಪೇಟಿಎಂಗೆ ಭಾರತದಲ್ಲಿ ಲಕ್ಷಾಂತರ ಮಂದಿ ಬಳಕೆದಾರರಿದ್ದಾರೆ.
ಮೂಲಗಳ ಮಾಹಿತಿ ಪ್ರಕಾರ, ಆನ್ ಲೈನ್ ಜೂಜಿನ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದ್ದು, ಆದರೆ ಗೂಗಲ್ ನಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಪೇಟಿಎಂ ಟ್ವೀಟ್:
ಈ ಬೆಳವಣಿಗೆಯ ಬಗ್ಗೆ ಟ್ವೀಟ್ ಮಾಡಿರುವ ಪೇಟಿಎಂ, ‘ಆತ್ಮೀಯ ಪೇಟಿಎಂ ಗ್ರಾಹಕರೇ , ಹೊಸ ಡೌನ್ಲೋಡ್ಗಳು ಅಥವಾ ನವೀಕರಣಗಳಿಗಾಗಿ Paytm Android ಅಪ್ಲಿಕೇಶನ್ Google ನ ಪ್ಲೇ ಸ್ಟೋರ್ನಲ್ಲಿ ತಾತ್ಕಾಲಿಕವಾಗಿ ಲಭ್ಯವಿಲ್ಲ. ಅದು ಶೀಘ್ರದಲ್ಲೇ ಹಿಂತಿರುಗಲಿದೆ. ನಿಮ್ಮ ಎಲ್ಲಾ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ, ಮತ್ತು ನಿಮ್ಮ Paytm ಅಪ್ಲಿಕೇಶನ್ ಅನ್ನು ನೀವು ಸಾಮಾನ್ಯ ರೀತಿಯಲ್ಲಿ ಆನಂದಿಸುವುದನ್ನು ಮುಂದುವರಿಸಬಹುದು’ ಎಂದಿದೆ.
ನಾಳೆಯಿಂದ ಮೆಜೆಸ್ಟಿಕ್’ನಿಂದಲೇ ಹೊರಡಲಿದೆ ಕಾರವಾರ- ಮಂಗಳೂರು ರೈಲು
ನಟ ಸುಶಾಂತ್ ಸಾವು ಪ್ರಕರಣ; ಎನ್’ಸಿಬಿಯಿಂದ ನಾಲ್ವರ ಬಂಧನ, ಡ್ರಗ್ಸ್ ವಶ
ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್; ಅಕುಲ್ ಸೇರಿ ಮೂವರಿಗೆ ಸಿಸಿಬಿ ನೋಟಿಸ್
ಚೀನಾದಲ್ಲಿ ಹೊಸ ವೈರಸ್: ಪುರುಷರನ್ನು ನಪುಂಸಕರನ್ನಾಗಿ ಮಾಡುತ್ತಿದೆ ಸೂಕ್ಷ್ಮ ಜೀವಿ