newsics.com
ಕೇರಳ: ಕೇರಳದ ಏಟ್ಟುಮಾನೂರು ಶಿವ ದೇವಾಲಯದಲ್ಲಿ ದೇವರಿಗೆ ಅಲಂಕರಿಸಿದ ಪವಿತ್ರ ರುದ್ರಾಕ್ಷ ಮಾಲೆಯ ಚಿನ್ನದ ಹೊದಿಕೆಯ ಮಣಿಗಳು ಕಾಣೆಯಾಗಿವೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
81 ಮಣಿಗಳ ಪೈಕಿ 9 ಮಣಿಗಳು ನಾಪತ್ತೆಯಾಗಿವೆ ಎಂದು ಆಂತರಿಕ ಲೆಕ್ಕಪರಿಶೋಧನೆಯಲ್ಲಿ ಕಂಡುಬಂದಿದೆ ಎಂದು ದೇವಾಲಯದ ಮೂಲಗಳ ಹೇಳಿಕೆ ಉಲ್ಲೇಖಿಸಿ ವರದಿ ತಿಳಿಸಿದೆ.
ಪ್ರಧಾನ ಅರ್ಚಕರಾಗಿ ಪದ್ಮನಾಭನ್ ಸಂತೋಷ್ ಅಧಿಕಾರ ಸ್ವೀಕರಿಸಿದ ಕೂಡಲೇ ದೇವಾಲಯದಲ್ಲಿ ಪೂಜೆಗಳು ಮತ್ತು ಇತರ ಆಚರಣೆಗಳಿಗೆ ಬಳಸಲಾಗುವ ಎಲ್ಲಾ ವಸ್ತುಗಳ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಸಂದರ್ಭ ಚಿನ್ನಲೇಪಿತ ಮಣಿಗಳು ಕಾಣೆಯಾಗಿರುವುದು ಕಂಡುಬಂದಿದೆ. ಈ ಕುರಿತು ತನಿಖೆ ನಡೆಸುವಂತೆ ಸಲಹಾ ಸಮಿತಿ ಒತ್ತಾಯಿಸಿದೆ.