newsics.com
ಕೊಲ್ಕತ್ತಾ: ಕೌಟುಂಬಿಕ ಕಲಹದ ವೇಳೆ ವ್ಯಕ್ತಿಯೊಬ್ಬ ಕುತ್ತಿಗೆಗೆ ತ್ರಿಶೂಲದಿಂದ ಚುಚ್ಚಿದ್ದಾನೆ. ಬಳಿಕ ಶಸ್ತ್ರ ಚಿಕಿತ್ಸೆಗಾಗಿ ತ್ರಿಶೂಲ ಸಮೇತ 65 ಕಿಲೋ ಮೀಟರ್ ಪ್ರಯಾಣ ಬೆಳೆಸಿದ್ದಾನೆ. ಪಶ್ಚಿಮ ಬಂಗಾಳದ ನಾಡಿಯಾದ ಕಲ್ಯಾಣಿ ಎಂಬಲ್ಲಿ ಈ ಪ್ರಕರಣ ವರದಿಯಾಗಿದೆ.
ಭಾಸ್ಕರ್ ರಾಮ್ ಕೌಟುಂಬಿಕ ಕಾರಣಕ್ಕೆ ಮನೆಯ ಇತರ ಸದಸ್ಯರ ಜತೆ ಜಗಳವಾಡಿದ್ದಾನೆ. ವಾಗ್ವಾದ ತೀವ್ರವಾದಾಗ ಭಾಸ್ಕರ್ ದೇವರಕೋಣೆ ಪ್ರವೇಶಿಸಿದ್ದಾನೆ, ಅಲ್ಲಿ ಇರಿಸಲಾಗಿದ್ದ 150 ವರ್ಷದ ಹಳೆಯ ತ್ರಿಶೂಲದಿಂದ ತನ್ನ ಕುತ್ತಿಗೆಗೆ ಚುಚ್ಚಿದ್ದಾನೆ.
ಇದನ್ನು ನೋಡಿದ ಭಾಸ್ಕರ್ ಸೋದರಿ, ಸ್ಥಳದಲ್ಲೇ ಪ್ರಜ್ಞಾಶೂನ್ಯಳಾಗಿ ಕುಸಿದು ಬಿದ್ದಿದ್ದಾರೆ. ನೆರೆಮನೆಯವರು ಸೇರಿ
ಭಾಸ್ಕರ್ ನನ್ನು ಆಸ್ಪತ್ರೆ ಕರೆದುಕೊಂಡು ಹೋದರು. ಅಲ್ಲಿಗೆ ತಲುಪಿದಾಗ ನಸುಕಿನ
ಜಾವ ಮೂರು ಗಂಟೆ ಸಮಯವಾಗಿತ್ತು.. ಬಳಿಕ ಶಸ್ತ್ರ ಚಿಕಿತ್ಸೆ ಬಳಿಕ ಕುತ್ತಿಗೆಯಲ್ಲಿ ಸಿಲುಕಿದ್ದ ತ್ರಿಶೂಲವನ್ನು ಹೊರತೆಗೆಯಲಾಯಿತ್ತು.