Monday, October 2, 2023

ಸಿಎಂ‌ ಮನೆ ಮೇಲೆ ಪೆಟ್ರೋಲ್ ಬಾಂಬ್, ಗೃಹಸಚಿವರ ರಾಜೀನಾಮೆ: ಶಿಲ್ಲಾಂಗ್’ನಲ್ಲಿ 2 ದಿನ ಕರ್ಫ್ಯೂ

Follow Us

newsics.com

ಶಿಲ್ಲಾಂಗ್(ಮೇಘಾಲಯ): ಶಿಲ್ಲಾಂಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಹಿಂಸಾಚಾರ ನಡೆದಿದೆ.

ಮೇಘಾಲಯದ ಗೃಹ ಸಚಿವರು ರಾಜೀನಾಮೆ ನೀಡಿದ್ದು, ಶಿಲ್ಲಾಂಗ್‌ನಲ್ಲಿ ಎರಡು ದಿನಗಳ ಕಾಲ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಭಾನುವಾರ ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ಅವರ ವೈಯಕ್ತಿಕ ನಿವಾಸದ ಮೇಲೆ ಪ್ರತಿಭಟನಾಕಾರರು ಪೆಟ್ರೋಲ್ ಬಾಂಬ್ ಎಸೆದಿದ್ದು, ಪರಿಸ್ಥಿತಿ‌ ಮತ್ತಷ್ಟು ಪ್ರಕ್ಷುಬ್ಧಗೊಂಡಿದೆ.
ಶಿಲ್ಲಾಂಗ್‌ನ ಹಲವು ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆದಿದೆ. ಪೊಲೀಸ್ ಚೌಕಿಯನ್ನು ಧ್ವಂಸ ಮಾಡಲಾಗಿದ್ದು, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಮಂಗಳವಾರ ಸಂಜೆ 5 ಗಂಟೆಯವರೆಗೆ ಶಿಲ್ಲಾಂಗ್‌ನಲ್ಲಿ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾಗೆ ಗೃಹ ಸಚಿವರು ರಾಜೀನಾಮೆ ಪತ್ರವನ್ನು ಭಾನುವಾರ ಸಲ್ಲಿಸಿದ್ದಾರೆ. ಶುಕ್ರವಾರ ಹತ್ಯೆಯಾದ ಚೆಸ್ಟರ್ ಫೀಲ್ಡ್ ತಂಗ್‌ಖಿವ್ (54) ಹತ್ಯೆ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಪತ್ರದಲ್ಲಿ ಮನವಿಯನ್ನು ಮಾಡಿದ್ದಾರೆ.

ನಿಷೇಧಿತ ಹೈನ್ನಿವ್‌ಟ್ರೆಪ್ ನ್ಯಾಷನಲ್ ಲಿಬರೇಷನ್ ಕೌನ್ಸಿಲ್ ಬಂಡುಕೋರ ಸಂಘಟನೆಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಚೆಸ್ಟರ್ ಫೀಲ್ಡ್ ತಂಗ್‌ಖಿವ್ ಅಂತ್ಯಕ್ರಿಯೆ ಭಾನುವಾರ ನಡೆಯಿತು. ಸಾವಿರಾರು ಜನರು ಕಪ್ಪುಪಟ್ಟಿ ಧರಿಸಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಪೊಲೀಸರ ಎನ್‌ಕೌಂಟರ್ ವೇಳೆ ಚೆಸ್ಟರ್ ಫೀಲ್ಡ್ ತಂಗ್‌ಖಿವ್ ಗಂಭೀರವಾಗಿ ಗಾಯಗೊಂಡಿದ್ದ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಚೆಸ್ಟರ್ ಫೀಲ್ಡ್ ತಂಗ್‌ಖಿವ್ ಹತ್ಯೆ ಖಂಡಿಸಿ ಶಿಲ್ಲಾಂಗ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆ ಭಾನುವಾರ ಹಿಂಸಾರೂಪಕ್ಕೆ ತಿರುಗಿದೆ.

ನಡುರಸ್ತೆಯಲ್ಲೇ ಬಿ.ಟೆಕ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ

ಹೆಲಿಕಾಪ್ಟರ್ ಪತನ: 12 ದಿನದ ಬಳಿಕ ಪೈಲಟ್ ಶವ ಪತ್ತೆ

ಕಾಬೂಲ್ ನಿಂದ 129 ಭಾರತೀಯರ ಏರ್ ಲಿಫ್ಟ್

ಹೆಚ್ಚಲಿದೆ ತಾಲಿಬಾನಿಗಳ ಅಹಂಕಾರ: ಭಾರತಕ್ಕೂ ಗಂಡಾಂತರ

ಮತ್ತಷ್ಟು ಸುದ್ದಿಗಳು

vertical

Latest News

ನಾಳೆಯಿಂದ ಕುಮಾರ ಪರ್ವತ ಚಾರಣಕ್ಕೆ ನಿರ್ಬಂಧ

newsics.com ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರಪರ್ವತಕ್ಕೆ ಚಾರಣ ಹೋಗಲು ನಾಳೆಯಿಂದ(ಅ. 3) ನಿರ್ಬಂಧ ವಿಧಿಸಲಾಗಿದೆ. ಪ್ರಸ್ತುತ ಜಿಲ್ಲೆಯಾದ್ಯಂತ...

ಚಿನ್ನ, ಬೆಳ್ಳಿ ದರ ಸ್ಥಿರ

Newsics.com ಬೆಂಗಳೂರು: ಕಳೆದ ವಾರ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದ ಚಿನ್ನ ಬೆಳ್ಳಿಯ ದರ ಈ ವಾರ ಸ್ಥಿರಗೊಂಡಿದೆ. ದೇಶದಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 53,350 ರೂ., 24 ಕ್ಯಾರಟ್ 10 ಗ್ರಾಂ...

ವಿಮಾನದ ತುರ್ತು ಬಾಗಿಲು ತೆರೆಯಲೆತ್ನಿಸಿದ ಪ್ರಯಾಣಿಕ: ತುರ್ತು ಭೂ ಸ್ಪರ್ಶ, ಬಂಧನ

newsics.com ದೇವನಹಳ್ಳಿ: ಟೇಕ್ಆಫ್ ಆಗುತ್ತಿದ್ದ ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸ್ವಪ್ನೋಲ್ ಹೋಲೆ ಬಂಧಿತ ಪ್ರಯಾಣಿಕ. ಸ್ವಪ್ನೋಲ್ ಇಂಡಿಗೋ...
- Advertisement -
error: Content is protected !!