newsics.com
ನವದೆಹಲಿ: ವಂಚಕ ಸುಕೇಶ್ ಚಂದ್ರ ಶೇಖರ್ ಗೆ ಸೆಲೆಬ್ರಿಟಿಗಳನ್ನು ಪರಿಚಯ ಮಾಡಿಸಿದ್ದ ಮಧ್ಯವರ್ತಿ ಪಿಂಕಿ ಇರಾನಿ ವೃತ್ತಿ ಜೀವನ ಆರಂಭಿಸಿದ್ದು ಟಿ ವಿ ನಿರೂಪಕಿಯಾಗಿ.
ಮುಂಬೈನ ಚಾನೆಲ್ ವೊಂದರಲ್ಲಿ ಮನೋರಂಜನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪಿಂಕಿ ಇರಾನಿಗೆ ಸುಲಭದಲ್ಲಿ ಸೆಲೆಬ್ರಿಟಿಗಳ ಪರಿಚಯವಾಗಿತ್ತು.
ಇದನ್ನು ಪಿಂಕಿ ಇರಾನಿ ದುರುಪಯೋಗಪಡಿಸಿದರು. ಇನ್ ಸ್ಟಾ ಗ್ರಾಮ್ ನಲ್ಲಿ ಸುಕೇಶ್ ಚಂದ್ರ ಶೇಖರ್ ಪರಿಚಯವಾದ ಬಳಿಕ ಪಿಂಕಿ ಇರಾನಿ ಆತನ ಬಲೆಗೆ ಬಿದ್ದಳು. ಸುಕೇಶ್ ಚಂದ್ರ ಶೇಖರ್ ಗೆ ನಟಿಯರ ಪರಿಚಯ ಮಾಡಿಕೊಟ್ಟಳು.
ಸುಕೇಶ್ ಹೆಣೆದ ಬಲೆಗೆ ನಟಿಯರು ಬಿದ್ದರು. ಅವರಿಗೆ ದುಬಾರಿ ಗಿಫ್ಟ್ ಗಳನ್ನು ನೀಡುವ ಮೂಲಕ ನಟಿಯರ ಮನಸ್ಸು ಗೆಲ್ಲುವ ಪ್ರಯತ್ನವನ್ನು ಸುಕೇಶ್ ಚಂದ್ರ ಶೇಖರ್ ಮಾಡಿದ್ದ.
ಇದಕ್ಕಾಗಿ ಪಿಂಕಿ ಇರಾನಿಗೆ ಕೂಡ ಭಾರೀ ಮೊತ್ತದ ಹಣವನ್ನು ಸುಕೇಶ್ ಚಂದ್ರ ಶೇಖರ್ ನೀಡಿದ್ದ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.