newsics.com
ಮುಂಬೈ: ನಟ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರಕ್ಕೆ ಪೈರಸಿ ಭೀತಿ ಎದುರಾಗಿದೆ. ಇಡೀ ಚಿತ್ರವನ್ನು ಸೆರೆ ಹಿಡಿದು ಈಗಾಗಲೇ ಲೀಕ್ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಯಶ್ ರಾಜ್ ಫಿಲ್ಮ್, ಪ್ರೇಕ್ಷಕರು ಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸುವಂತೆ ಮನವಿ ಮಾಡಿದೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಿರ್ಮಾಪಕರು ಎಚ್ಚರಿಕೆ ನೀಡಿದ್ದಾರೆ. ದೀಪಿಕಾ ಪಡುಕೋಣೆ ಚಿತ್ರದ ನಾಯಕಿ.
ಚಿತ್ರ ಯಾವುದೇ ಭಾಷೆಯಲ್ಲಿರಲಿ. ಅದರ ಹಿಂದೆ ಸಾವಿರಾರು ಮಂದಿಯ ಕಠಿಣ ಪರಿಶ್ರಮ ಇರುತ್ತದೆ. ಪೈರಸಿ ಅವರೆಲ್ಲರ ಬದುಕಿನ ಅನ್ನ ಕಸಿದುಕೊಳ್ಳುತ್ತದೆ.
ಜೆಎನ್ ಯು ವಿಶ್ವ ವಿದ್ಯಾಲಯದಲ್ಲಿ ಬಿಬಿಸಿ ಸಾಕ್ಷ್ಯ ಚಿತ್ರ ಪ್ರದರ್ಶನ: ಕಲ್ಲು ತೂರಾಟ