Wednesday, November 30, 2022

ರೈಲು ಹತ್ತಲು ಪ್ಲಾಟ್‌ಫಾರ್ಮ್ ಟಿಕೆಟ್ ಅಷ್ಟೇ ಸಾಕು! ರೈಲಲ್ಲೇ ಟಿಕೆಟ್ ಸಿಗತ್ತೆ

Follow Us

newsics.com

ನವದೆಹಲಿ: ನಿಮ್ಮ ಬಳಿ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್ ಇದ್ದರೆ ನೀವು ರೈಲು ಹತ್ತಬಹುದು. ಬಳಿಕ ರೈಲಿನಲ್ಲೇ ಟಿಟಿಇಯಿಂದ ಟಿಕೆಟ್ ಪಡೆಯಬಹುದು.

ಹೌದು, ಇಂತಹದೊಂದು ಅವಕಾಶವನ್ನು ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಕಲ್ಪಿಸಿದೆ. ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸದಿದ್ದರೂ, ಟಿಕೆಟ್‌ ಪಡೆದುಕೊಳ್ಳದಿದ್ದರೂ ನಿರ್ಭಯವಾಗಿ ರೈಲು ಹತ್ತಬಹುದು.

ಕೇವಲ ಪ್ಲಾಟ್‌ಫಾರ್ಮ್ ಟಿಕೆಟ್‌ ಇದ್ದರೆ ಸಾಕು. ರೈಲು ಹತ್ತಿದ ನಂತರ ಫ್ಲಾಟ್‌ಫಾರ್ಮ್ ಟಿಕೆಟ್‌ ಅನ್ನು ಟಿಟಿಇಗೆ ತೋರಿಸಿ, ಟಿಕೆಟ್‌ ಖರೀದಿಸಿದರೆ ಸಾಕು.

ಗಡಿಬಿಡಿಯಿಂದ ರೈಲ್ವೆ ನಿಲ್ದಾಣ ತಲುಪಿ ಹೈರಾಣಾಗುವುದನ್ನು ತಪ್ಪಿಸಲು ಭಾರತೀಯ ರೈಲ್ವೆ ಈ ಸೌಲಭ್ಯವನ್ನು ಪ್ರಯಾಣಿಕರಿಗೆ ಕಲ್ಪಿಸಿದೆ. ಮುಂಗಡ ಟಿಕೆಟ್‌ ಕಾಯ್ದಿರಿಸದೆ ಸ್ಟೇಷನ್‌ ಗೆ ಬರುವ ಪ್ರಯಾಣಿಕರು ಅಲ್ಲಿನ ಟಿಕೆಟ್‌ ಕೌಂಟರ್‌ಗಳ ಮುಂದೆ ಕ್ಯೂ ನಿಲ್ಲುವ ಅಗತ್ಯವಿಲ್ಲ.

ಯುಟಿಸಿ ಆಪ್‌ ಮೂಲಕ ಇಲ್ಲವೇ ಸ್ಟೇಷನ್‌ ಗಳಲ್ಲಿರುವ ವೆಂಡಿಂಗ್‌ ಮೆಷಿನ್‌ ಮೂಲಕ ಪ್ಲಾಟ್‌ಫಾರ್ಮ್ ಟಿಕೆಟ್‌ ಪಡೆದುಕೊಂಡರೆ ಸಾಕು. ಅದರೊಂದಿಗೆ ರೈಲು ಹತ್ತಬಹುದು. ಅಷ್ಟೇ ಅಲ್ಲ, ಸೀಟುಗಳು ಲಭ್ಯವಿದ್ದರೆ ರಿಸರ್ವೇಷನ್‌ ಮಾಡಿಸಿಕೊಂಡು ಬರ್ತ್‌ ಕೂಡ ಪಡೆದುಕೊಳ್ಳಬಹುದು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಮತ್ತಷ್ಟು ಸುದ್ದಿಗಳು

vertical

Latest News

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್ ತನಿಖೆಯಲ್ಲಿ ಈ ಅಂಶ ಬಯಲಾಗಿದೆ. ಕೇವಲ...
- Advertisement -
error: Content is protected !!