Wednesday, October 5, 2022

ಅಮೆರಿಕದ ನೂತನ ಅಧ್ಯಕ್ಷರನ್ನು ಅಭಿನಂದಿಸಿದ ಪ್ರಧಾನಿ ಮೋದಿ

Follow Us

Newsics.com

ನವದೆಹಲಿ: ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆ ಯಾಗಿರುವ ಜೋ ಬೈಡನ್ ಮತ್ತು ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಕಮಲಾ ಹ್ಯಾರಿಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಮುಂಬರುವ ದಿನಗಳಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ ಎಂಬ ಆಶಾವಾದವನ್ನು ಮೋದಿ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿರುವ ಮೋದಿ, ಅಮೆರಿಕದ ಜತೆ ಭಾರತ ಅತ್ಯುತ್ತಮ ರಾಜತಾಂತ್ರಿಕ ಸಂಬಂಧ ಹೊಂದಿದೆ ಎಂದು ಹೇಳಿದ್ದಾರೆ.

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಜತೆ ಮೋದಿ ವೈಯಕ್ತಿಕ ನೆಲೆಯಲ್ಲಿ ಕೂಡ ಉತ್ತಮ ಸಂಬಂಧ ಹೊಂದಿದ್ದರು. ಅಹಮ್ಮದಾಬಾದ್’ನಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಗಿತ್ತು. ಆದರೆ ಚುನಾವಣೆಯ ಟ್ರೆಂಡ್ ಹೊರಬರುತ್ತಲೆ ವಿದೇಶಾಂಗ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿರಲಿಲ್ಲ.

ಪೂರ್ಣ ಫಲಿತಾಂಶ ಬಂದ ಬಳಿಕ ಪ್ರತಿಕ್ರಿಯಿಸುವುದಾಗಿ ಹೇಳಿತ್ತು. ಭಾರತ ಜಾಗತಿಕ ಮಟ್ಟದಲ್ಲಿ ಬಲಿಷ್ಟ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವುದರಿಂದ ಭಾರತವನ್ನು ನಿರ್ಲಕ್ಷಿಸಲು ಅಮೆರಿಕಕ್ಕೆ ಸಾಧ್ಯವಿಲ್ಲ.

ಆದರೆ , ನೂತನ ಅಮೆರಿಕ ಆಡಳಿತ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಕುತೂಹಲದ ವಿಷಯವಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...
- Advertisement -
error: Content is protected !!