newsics.com
ನವದೆಹಲಿ; 75ನೇ ಸ್ವಾಂತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
2047ರ ವೇಳೆಗೆ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸಾಗಿಸಲು ಪಣತೊಡಬೇಕು. ಮುಂದಿನ 25 ವರ್ಷಗಳನ್ನು ದೇಶದ ಅಭಿವೃದ್ಧಿಗಾಗಿ ಮೀಸಲಿಡುವಂತೆ ನಾನು ಯುವಕರನ್ನು ಒತ್ತಾಯಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಹೀಗಾಗಿ ಸ್ವಾತಂತ್ರ್ಯ ಹೋರಾಟಗಾರರ ಪಂಚ ಪ್ರತಿಜ್ಞೆಯನ್ನು ಉಲ್ಲೇಖಿಸಿದ್ದು,
1, ಅಭಿವೃದ್ಧಿ ಹೊಂದಿದ ಭಾರತ ದೊಡ್ಡ ಸಂಕಲ್ಪದೊಂದಿಗೆ ಮುಂದುವರೆಯುವುದು
2. ಗುಲಾಮಗಿರಿಯನ್ನು ಸಂಪೂರ್ಣವಾಗಿ ತೊಡೆದು ಹಾಕುವುದು
3 ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಯನ್ನು ಹೊಂದಿರುವುದು
4 ಏಕತೆಯ ಶಕ್ತಿ
5. ನಮ್ಮ ಕರ್ತವ್ಯ ನಿರ್ವಹಿಸುವುದು
ಈ 5 ಪ್ರತಿಜ್ಞೆ ಉಲ್ಲೇಖಿಸಿ ಪ್ರಧಾನಿ ತಮ್ಮ ಭಾಷಣ ಮಾಡಿದ್ದಾರೆ.