Wednesday, October 5, 2022

ನಿಮ್ಮ ಸಂತಸ ನನ್ನ ನಗುವನ್ನು ದ್ವಿಗುಣಗೊಳಿಸುತ್ತದೆ- ಯೋಧರಿಗೆ ಪ್ರಧಾನಿ ಭಾವನಾತ್ಮಕ ಸಂದೇಶ

Follow Us

NEWSICS.COM

ರಾಜಸ್ಥಾನ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಪ್ರಧಾನಿ ದೇಶ ಕಾಯುವ ಯೋಧರೊಂದಿಗೆ ದೀಪಾವಳಿ ಆಚರಿಸಲು ರಾಜಸ್ಥಾನದ ಜೈಸಾಲ್ಮ ರ್ ಪ್ರದೇಶಕ್ಕೆ ತೆರಳಿದ್ದಾರೆ.
ಈ ಸಂದರ್ಭದಲ್ಲಿ ಮೋದಿ ಯೋಧರೊಂದಿಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಹಿಮದ ಪರ್ವತಗಳಲ್ಲಿ ಅಥವಾ ಮರುಭೂಮಿಯಲ್ಲಿ ನೀವು ಇರುತ್ತೀರಿ ನಿಮ್ಮೊಂದಿಗೆ ಆಚರಿಸಿದಾಗ ಮಾತ್ರ ನನ್ನ ದೀಪಾವಳಿ ಹಬ್ಬ ಪರಿಪೂರ್ಣವಾಗುತ್ತದೆ ನಿಮ್ಮ ಮುಖದಲ್ಲಿನ ಸಂತಸವನ್ನು ಕಂಡಾಗಲೇ ನನ್ನ ಮುಖದಲ್ಲಿ ನಗು ದ್ವಿಗುಣವಾಗುತ್ತದೆ ಎಂದು ಭಾವನಾತ್ಮಕ ಹೇಳಿದ್ದಾರೆ.
ದೇಶದ 130 ಕೋಟಿ ಜನರು ನಿಮ್ಮೊಂದಿಗಿದ್ದಾರೆ. ಎಂತಹ ಕಠಿಣ ಪರಿಸ್ಥಿತಿಗಳಲ್ಲೂ ನಿಮ್ಮ ಶೌರ್ಯ ತೋರಿದ್ದೀರಿ ಎಂದು ಸೈನಿಕರನ್ನು ಹೊಗಳಿ ಮತ್ತಷ್ಟು ಭರವಸೆ ನೀಡಿದ್ದಾರೆ. ಜೈಸಾಲ್ಮರ್ ನಲ್ಲಿ ರಕ್ಷಣಾ ಪಡೆಯ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್, ಸೇನೆಯ ಮುಖ್ಯಸ್ಥ ಎಂ.ಎಂ.ನಾರವಾನೆ ಹಾಗೂ ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಪ್ರಧಾನ ನಿರ್ದೇಶಕ ರಾಕೇಶ್ ಅಸ್ಥನಾ ಕೂಡ ಭೇಟಿ ನೀಡಿದ್ದರು.

ಪಾಕಿಸ್ತಾನಕ್ಕೆ ಸೂಕ್ತ ಪಾಠ ಕಲಿಸಿದ್ದೇವೆ: ಮೋದಿ ಘೋಷಣೆ

 

ಮತ್ತಷ್ಟು ಸುದ್ದಿಗಳು

vertical

Latest News

ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ; ನಗರದಲ್ಲಿ ಬಿಗಿ ಭದ್ರತೆ

newsics.com ಮೈಸೂರು; ಐತಿಹಾಸಿಕ ದಸರಾ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ನಗರದ ಸುತ್ತಮುತ್ತ ಭದ್ರತೆಗಾಗಿ 5 ಸಾವಿರಕ್ಕೂ ಹೆಚ್ಚು ಪೊಲೀಸರನ್ನು,ನಿಯೋಜಿಸಲಾಗಿದೆ. ಸಂಜೆ 05:07 ರಿಂದ 5.18ರ ವರೆಗೆ ಸಲ್ಲುವ...

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...
- Advertisement -
error: Content is protected !!