newsics.com
ನವದೆಹಲಿ: ದೇಶದ ಮೊದಲ ಸಂಪೂರ್ಣ ಸ್ವಯಂಚಾಲಿತ ಚಾಲಕರಹಿತ ಮೆಟ್ರೊ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೊದಲ ಚಾಲಕರಹಿತ ಮೆಟ್ರೊ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.
ದೆಹಲಿ ಮೆಟ್ರೋದ 37 ಕಿ.ಮೀ ಉದ್ದದ ಮೆಜೆಂಟಾ ಲೈನ್ (ಜನಕಪುರಿ ವೆಸ್ಟ್ ನಿಂದ ಬೊಟಾನಿಕಲ್ ಗಾರ್ಡನ್) ದೇಶದ ಮೊದಲ ಸಂಪೂರ್ಣ ಸ್ವಯಂಚಾಲಿತ ಚಾಲಕರಹಿತ ರೈಲು ಸೇವೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ದೆಹಲಿ ಮೆಟ್ರೋ ಭಾರತದ ಅತಿ ದೊಡ್ಡ ಮೆಟ್ರೋ ಆಗಿದ್ದು, ಕೊಲ್ಕತ್ತಾ ಮೆಟ್ರೋ ನಂತರ ದೇಶದ ಎರಡನೇ ಅತಿ ಹಳೆಯ ಮೆಟ್ರೋ ಆಗಿದೆ. ದೆಹಲಿ ಮೆಟ್ರೋ ಚಾಲಕರಹಿತ ರೈಲುಗಳು ಡಿಎಂಆರ್ ಸಿಯ ಮೂರನೇ ಹಂತದ ಭಾಗವಾಗಿ ತಯಾರಿಸಲಾದ ಮೆಜೆಂಟಾ ಲೈನ್ ಮತ್ತು ಪಿಂಕ್ ಲೈನ್ ನಲ್ಲಿ ಕಾರ್ಯನಿರ್ವಹಿಸಲಿವೆ. 2017ರ ಸೆಪ್ಟೆಂಬರ್ ನಲ್ಲಿ ದೆಹಲಿ ಮೆಟ್ರೋ ಪಿಂಕ್ ಲೈನ್ ನಲ್ಲಿ 20 ಕಿ.ಮೀ ಉದ್ದದ ಹೊಸ ‘ಚಾಲಕರಹಿತ ರೈಲು’ಗಳ ಪೂರ್ಣ ಸಿಗ್ನಲ್ ಪ್ರಯೋಗ ಆರಂಭಿಸಿತ್ತು.
ಜ.1ರಿಂದಲೇ ಶಾಲಾ-ಕಾಲೇಜು ಆರಂಭ- ಸಿಎಂ