newsics.com
ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ನವದೆಹಲಿಯಲ್ಲಿ ನೂರು ಕೋಟಿ ರುಪಾಯಿ ಮೌಲ್ಯದ ಮೂರು ಹೋಟೆಲ್’ಗಳನ್ನು ಶುಕ್ರವಾರ ಮುಟ್ಟುಗೋಲು ಹಾಕಿದೆ.
ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ (ಪಿಎಂಸಿ) ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಈ ಕ್ರಮ ಕೈಗೊಂಡಿದೆ.
ನವದೆಹಲಿಯಲ್ಲಿನ ಹೋಟೆಲ್ ಕಾನ್ ಕ್ಲೇವ್ ಬೌಟಿಕ್, ಹೋಟೆಲ್ ಕಾನ್ ಕ್ಲೇವ್ ಕಂಫರ್ಟ್ ಹಾಗೂ ಕಾನ್ ಕ್ಲೇವ್ ಎಕ್ ಕ್ಯೂಟಿವ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಲಿಬ್ರಾ ರಿಯಾಲ್ಟರ್ಸ್, ದೀವಾನ್ ರಿಯಾಲ್ಟರ್ಸ್, ರಾಕೇಶ್ ಕುಮಾರ್ ವಾಧ್ವಾನ್, ರೊಮಿ ಮೆಹ್ರಾ, ಲಿಬ್ರಾ ಹೋಟೆಲ್ಸ್ ಮತ್ತು ಅದರ ನಿರ್ದೇಶಕರಿಗೆ ಈ ಹೋಟೆಲ್ ಗಳು ಸೇರಿದ್ದು ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ತನಿಖೆ ಪ್ರಕಾರ, ಲಿಬ್ರಾ ರಿಯಾಲ್ಟರ್ಸ್ ಮತ್ತು ದೀವಾನ್ ರಿಯಾಲ್ಟರ್ಸ್ ನವರು ಪಿಎಂಸಿ ಬ್ಯಾಂಕ್ ನಿಂದ ವಂಚನೆ ಮಾಡಿ, ಸಾಲದ ರೂಪದಲ್ಲಿ 247 ಕೋಟಿ ರುಪಾಯಿ ಪಡೆದಿತ್ತು. ಎಚ್ ಡಿಐಎಲ್ ಸಮೂಹ ಪಡೆದಿದ್ದ 6117 ಕೋಟಿ ರುಪಾಯಿಯಲ್ಲಿ ಈ ಮೊತ್ತವೂ ಒಳಗೊಂಡಿದೆ ಎಂದು ಇಡಿ ಹೇಳಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪಿಎಂಸಿ ಬ್ಯಾಂಕ್ ವಂಚನೆ ಬಯಲಿಗೆ ಬಂದಿತ್ತು.
ಕೊರೋನಾ ಸಂಕಷ್ಟ ನಿವಾರಿಸಲು ಹೊಸ ವಿಮಾ ಪಾಲಿಸಿ : ಐಆರ್ ಡಿಎಐ ಸೂಚನೆ